ತಂದೆ – ಮಗಳು ನಾಪತ್ತೆ: ದೂರು ದಾಖಲು

ಕಾಪು : ಉಳಿಯಾರಗೋಳಿ ಗ್ರಾಮದ ಕಲ್ಯಾ ಭರತ್‌ ನಗರ ನಿವಾಸಿ ದಿನೇಶ್ ಶೆಟ್ಟಿಗಾರ(45) ಮತ್ತು ಅವರ 5 ವರ್ಷದ ಮಗಳು ವಿಸ್ಮಿತ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ದಿನೇಶ್ ಅವರು ಕೂಲಿ ಕೆಲಸ ಮಾಡಿಕೊಂಡಿದ್ದು, ಸೆ.26ರ ಮಗುವಿನ ಜನ್ಮದಿನದ ಹಿನ್ನೆಲೆ ಬಟ್ಟೆ ತೆಗೆದುಕೊಡಿಸುವುದಾಗಿ ಹೇಳಿ ಸೆ.25ರಂದು ಸಂಜೆ ಮನೆಯಿಂದ ಮಗುವನ್ನು ಕರೆದು ಹೊರಗೆ ಹೋಗಿದ್ದಾರೆ. ಈವರೆಗೆ ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





































error: Content is protected !!
Scroll to Top