ಸ್ವಚ್ಛತಾಭಿಯಾನ ಮಾಸಾಚರಣೆ – 2026 ಉದ್ಘಾಟನೆ
ಕಾರ್ಕಳ: ತರುಣ ಭಾರತ ಚಾರಿಟೇಬಲ್ ಟ್ರಸ್ಟ್ (ರಿ.) ಮಾತೃಭೂಮಿ ಸೇವಾ ಕೇಂದ್ರ ಹೆರ್ಮುಂಡೆ ಇವರ ನೇತೃತ್ವದಲ್ಲಿ ಮರ್ಣೆ ಗ್ರಾಮ ಪಂಚಾಯತ್ ಹಾಗು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಣ್ಣೆಹೊಳೆ ಇವರ ಸಹಭಾಗಿತ್ವದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ಮತ್ತು ಸ್ವಚ್ಛತಾಭಿಯಾನ ಮಾಸಾಚರಣೆ – 2026 ಉದ್ಘಾಟನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಣ್ಣೆಹೊಳೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಭಾವಚಿತ್ರಗಳಿಗೆ ಗೌರವವನ್ನು ಸಲ್ಲಿಸಿ ಅವರ ಆದರ್ಶಗಳನ್ನು ನೆನಪಿಸಲಾಯಿತು.

ತರುಣ ಭಾರತ ಚಾರಿಟೇಬಲ್ ಟ್ರಸ್ಟ್ (ರಿ.) ಆಶ್ರಯದಲ್ಲಿ ನಡೆಯುವ “ಸ್ವಚ್ಚತಾಭಿಯಾನ ಮಾಸಾಚರಣೆ – 2026” ಇದರ ಉದ್ಘಾಟನೆಯನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಪ್ರೇಮಾನಂದ ನಾಯಕ್ ಎಣ್ಣೆಹೊಳೆ ದೀಪವನ್ನು ಪ್ರಜ್ವಲಿಸುವ ಮೂಲಕ ನೆರವೇರಿಸಿ ಶುಭ ಹಾರೈಸಿದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷೆ ಪ್ರತಿಮಾ ನಾಯಕ್ ಅವರು ಅಧ್ಯಕ್ಷತೆ ವಹಿಸಿದ್ದರು.
ಮರ್ಣೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಂಕಿತ ನಾಯಕ್ ಸ್ವಚ್ಚತಾ ಅಭಿಯಾನದ ಅಗತ್ಯತೆ ಮತ್ತು ಅನುಷ್ಠಾನಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಿಳಿಸಿದರು.
ಶಾಲಾ ಸಹಶಿಕ್ಷಕರು, ಶಿಕ್ಷಕೇತರ ವೃಂದ, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಸ್ಥೆಯ ಕಿರು ಪರಿಚಯ ಉದಯ ಕುಮಾರ್ ಹೆಗ್ಡೆ ಹೆರ್ಮುಂಡೆ ಮಂಡಿಸಿದರು.
ಮುಖ್ಯೋಪಾಧ್ಯಾಯ ಉಮೇಶ್ ನಾಯಕ್ ಸ್ವಾಗತಿಸಿದರು. ಸಹ ಶಿಕ್ಷಕ ಸದಾನಂದ ನಿರೂಪಿಸಿದರು. ತರುಣ ಭಾರತ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಸತೀಶ ಹೆಗ್ಡೆ ಧನ್ಯವಾದ ಸಮರ್ಪಿಸಿದರು.



















