ಕಾರ್ಕಳ: ಏಳನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ ಇವರ ವತಿಯಿಂದ ಜಾಥಾ ನಡೆಯಿತು.
ಉದ್ಘಾಟನೆಯನ್ನು ಶಾಸಕ ವಿ. ಸುನೀಲ್ ಕುಮಾರ್ ಇವರು ನೆರವೇರಿಸಿದರು.
ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ. ರವಿಶಂಕರ್ ಭಾ.ಅ.ಸೇ., ಆಕಾಶ್ ಕದಮ್ ಭಾ.ಅ.ಸೇ., ಸತೀಶ್ ಎನ್. ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಅರಣ್ಯ ಸಂಚಾರಿ ದಳ, ಉಡುಪಿ, ಆನಂದ ರಾಯಿ ಎಸ್‌ಡಿಎಂಸಿ ಅಧ್ಯಕ್ಷರು, ಸುಂದರ ಪೂರಾಣಿಕ ಪ್ರೌಢ ಶಾಲೆ, ಕಾರ್ಕಳ, ಜಿ.ಡಿ. ದಿನೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ಉಪ ವಿಭಾಗ, ಸಿದ್ದಾಪುರ ಹಾಗೂ ಲತಾ ಗುರು ಭಟ್ಟ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಕುದುರೆಮುಖ ವನ್ಯಜೀವಿ ಉಪ ವಿಭಾಗ, ಕಾರ್ಕಳ ಉಪಸ್ಥಿತರಿದ್ದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ ಕಚೇರಿ ಆವರಣದಿಂದ ಆರಂಭಗೊಂಡು ಜಾಥಾವು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಾರ್ಯಾಲಯ, ತಾಲೂಕು ಕಚೇರಿ, ಬಂಡೀಮಠ, ಶ್ರೀ ವೆಂಕಟರಮಣ ದೇವಸ್ಥಾನದ ಮಾರ್ಗವಾಗಿ, ಕಾರ್ಕಳ ಬಸ್‌ಸ್ಟ್ಯಾಂಡ್ ಮಾರ್ಗವಾಗಿ, ಶ್ರೀ ಅನಂತಶಯನ ದೇವಸ್ಥಾನದ ಮಾರ್ಗವಾಗಿ ಕೋರ್ಟ್ ರಸ್ತೆಯಿಂದ ಸಾಗಿ ಶ್ರೀ ಸುಂದರ ಪೂರಾಣಿಕ ಪ್ರೌಢ ಶಾಲೆಯ ಸಭಾಂಗಣಕ್ಕೆ ತೆರಳಿ ಸಭಾ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ಆಳ್ವಾಸ್ ವಿದ್ಯಾಸಂಸ್ಥೆ, ಮೂಡಬಿದ್ರೆ ಇವರ ಡೋಲುಕುಣಿತ ಹಾಗೂ ನಾಸಿಕ್ ಡೋಲು ಜನರನ್ನು ಆಕರ್ಷಿಸಿತು.
ಶ್ರೀ ಸುಂದರ ಪೂರಾಣಿಕ ಪ್ರೌಢ ಶಾಲೆ, ಪೆರ್ವಾಜೆ, ಕಾರ್ಕಳ, ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜು ಗಾಂಧಿ ಮೈದಾನ, ಕಾರ್ಕಳ, ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್, ಕಾರ್ಕಳ, ಕ್ರಿಯೇಟಿವ್ ವಿದ್ಯಾ ಸಂಸ್ಥೆ, ಕಾರ್ಕಳ, ಜ್ಞಾನಸುಧಾ ವಿದ್ಯಾ ಸಂಸ್ಥೆ, ಕಾರ್ಕಳ, ಶ್ರೀ ಮಂಜುನಾಥ ಮೆಮೋರಿಯಲ್ ಸ್ಮಾರಕ ಪದವಿ ಕಾಲೇಜು, ಕಾರ್ಕಳಗಳಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರು ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಕುದುರೆಮುಖ ವನ್ಯಜೀವಿ ವಿಭಾಗದ ಎಲ್ಲಾ ಸ್ತರದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಕಾರ್ಕಳ ಪ್ರಾದೇಶಿಕ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಪೊಲೀಸ್ ಇಲಾಖಾ ಸಿಬ್ಬಂದಿ ಹಾಗೂ ಸಾರ್ವಜನಿಕ ಆಸ್ಪತ್ರೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕರಿಸಿದರು.



















