ನಾಲ್ಕೂರು ನರಸಿಂಗ ರಾವ್ ಸ್ಮಾರಕ ಸರ್ಕಾರಿ ಪ. ಪೂ. ಕಾಲೇಜು ಶಿರ್ಲಾಲು: ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

ಕಾರ್ಕಳ: ನಾಲ್ಕೂರು ನರಸಿಂಗ ರಾವ್ ಸ್ಮಾರಕ ಸರ್ಕಾರಿ ಪದವಿ ಪೂರ್ವ ಕಾಲೇಜು, ಶಿರ್ಲಾಲು ಇಲ್ಲಿನ ಪ್ರೌಢಶಾಲಾ ವಿಭಾಗ ನೂತನ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷರಾಗಿ ಪ್ರಕಾಶ್ ಪೂಜಾರಿ ಕೆರ್ವಾಶೆ, ಕಾರ್ಯದರ್ಶಿಯಾಗಿ ಶೀತಲ್ ಕುಮಾರ್ ಜೈನ್ (ನ್ಯಾಯವಾದಿಗಳು) ಹಾಗೂ ಕೋಶಾಧಿಕಾರಿಯಾಗಿ ರಮಾನಂದ ಪೂಜಾರಿ ಶಿರ್ಲಾಲು ಆಯ್ಕೆಯಾದರು.

ನಿಕಟ ಪೂರ್ವ ಅಧ್ಯಕ್ಷ ಶೀತಲ್ ಜೈನ್ ರನ್ನು ಗೌರವಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಸುದೀಪ್ ಹೆಗ್ಡೆ ಶಿರ್ಲಾಲು, ರವೀಂದ್ರ ಎಸ್ ಪೂಜಾರಿ ಶಿರ್ಲಾಲು, ಶಶಿಕಾಂತ್ ಪ್ರಭು ಶಿರ್ಲಾಲು, ಅಭಿನಂದನ್ ಜೈನ್ ಜಾರ್ಕಳ ಮುಂಡ್ಲಿ, ಸುರೇಖಾ ಶೆಟ್ಟಿ, ಶಿರ್ಲಾಲು, ಮಹೇಶ್ ಜಿ ಶೆಟ್ಟಿ ಶಿರ್ಲಾಲು, ಅಕ್ಷಯ ಜೈನ್ ಕೆರ್ವಾಶೆ, ದಿನೇಶ್ ಆಚಾರ್ಯ ಅಂಡಾರು ಅವರನ್ನು ಉಪಾಧ್ಯಕ್ಷರುಗಳಾಗಿ ಆಯ್ಕೆ ಮಾಡಲಾಯಿತು.

ಜೊತೆ ಕಾರ್ಯದರ್ಶಿಯಾಗಿ ನಿತಿನ್ ಶಿರ್ಲಾಲು ಹಾಗೂ ಪೂಜಾ ಕೆರ್ವಾಶೆ, ಕ್ರೀಡಾ ಕಾರ್ಯದರ್ಶಿಯಾಗಿ ನಿತಿನ್ ಚರಿತ್ರೆ ಹಾಗೂ ವಿದ್ಯಾಶ್ರೀ ಕೆರ್ವಾಶೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಕ್ಷಣ್ ಭಂಡಾರಿ ಶಿರ್ಲಾಲು ಹಾಗೂ ರಂಜಿತ್ ಪೂಜಾರಿ ಶಿರ್ಲಾಲು ಇವರು ಆಯ್ಕೆಯಾದರು.

ನೂತನ ಹಳೆ ವಿದ್ಯಾರ್ಥಿ ಸಂಘಕ್ಕೆ ಶಾಲಾ ಅಭಿವೃದ್ಧಿ ಸಮಿತಿ, ಕಾಲೇಜು ಅಭಿವೃದ್ಧಿ ಸಮಿತಿ, ಮುಖ್ಯ ಶಿಕ್ಷಕರು,ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರು ಅಭಿನಂದನೆ ಸಲ್ಲಿಸಿದರು.

a href="#" target="_blank">







































error: Content is protected !!
Scroll to Top