ಅನುಮತಿ ಪಡೆಯದೆ ರೈಫಲ್‌ಗೆ ‌ಟೆಲಿಸ್ಕೋಪ್ ಅಳವಡಿಕೆ: ಪ್ರಕರಣ ದಾಖಲು

ಕಾರ್ಕಳ: ಯಾವುದೇ ಅನುಮತಿ ಪಡೆಯದೆ ರೈಫಲ್‌ಗೆ ‌ಟೆಲಿಸ್ಕೋಪ್ ಅಳವಡಿಸಿದ ವ್ಯಕ್ತಿಯೊಬ್ಬರ ‌ವಿರುದ್ಧ ಪ್ರಕರಣ ದಾಖಲಾಗಿದೆ.

ಕೌಡೂರಿನ ದಿನೇಶ್ ಶೆಟ್ಟಿ ಅವರು ಆತ್ಮರಕ್ಷಣೆಗಾಗಿ ಇರಿಸಿಕೊಂಡ ರೈಫಲ್‌ಗೆ ಯಾವುದೇ ಅನುಮತಿ ಇಲ್ಲದೆ ಟೆಲಿಸ್ಕೋಪ್ ಅನ್ನು ಅಳವಜಿಸಿದ್ದರು. ಎನ್‌ಪಿಬಿ ರೈಫಲ್ (ಬೇರಿಂಗ್ ನಂಬ್ರ 12669) ವನ್ನು ಕರ್ನಾಟಕ ರಾಜ್ಯದ ವ್ಯಾಪ್ತಿಗೆ ಆತ್ಮರಕ್ಷಣೆ ಬಗ್ಗೆ ಪರವಾನಿಗೆ ಹೊಂದಿದ್ದು ಪರವಾನಿಗೆ ದಿನಾಂಕ 31/12/2027 ರವರೆಗೆ ಊರ್ಜಿತದಲ್ಲಿ ಇರುತ್ತದೆ. ದಿನೇಶ್ ಶೆಟ್ಟಿಯವರು ರೈಫಲ್‌ನ್ನು ಠಾಣೆಯಲ್ಲಿ ಡೆಪಾಸಿಟ್ ಇರಿಸಿದ್ದು, ಉಡುಪಿ ಜಿಲ್ಲಾ ಸಶಸ್ರ್ತ (armer ) ವಿಭಾಗದವರು ಡೆಪಾಸಿಟ್ ಇಟ್ಟಿರುವ ಬಂದೂಕುಗಳನ್ನು ಪರಿಶೀಲಿಸಿದಾಗ ರೈಪಲ್‌ಗೆ ಹೆಚ್ಚುವರಿ ಟೆಲಿಸ್ಕೋಫ್ ಆಳವಡಿಸಿರುವುದು ಕಂಡು ಬಂದಿರುತ್ತದೆ. ಅವರಿಗೆ ನೀಡಿರುವ ಲೈಸನ್ಸ್‌ನಲ್ಲಿ ರೈಪಲ್‌ಗೆ ಯಾವುದೇ ಟೆಲಿಸ್ಕೋಫ್ ಆಳವಡಿಸಲು ಅನುಮತಿ ನೀಡಿರುವುದಿಲ್ಲ. ಆದರೂ ಸಹ ಅವರು ಸಕ್ಷಮ ಪ್ರಾಥಿಕಾರದಿಂದ ಅನುಮತಿ ಪಡೆಯದೇ ಪರವಾನಿಗೆ ನಿಯಮವನ್ನು ಉಲ್ಲಂಘನೆ ಮಾಡಿ ಯಾವುದೋ ದುರುದ್ದೇಶದಿಂದ ರೈಪಲ್ ನಲ್ಲಿ ಟೆಲಿಸ್ಕೋಫ್ ಆಳವಡಿಸಿ ಮಾರ್ಪಾಡು ಮಾಡಿರುತ್ತಾರೆ ಎಂದು ಹೇಳಲಾಗಿದೆ.

ಕಾರ್ಕಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ‌.





























































































































error: Content is protected !!
Scroll to Top