ಆಗಬೇಕು ಪ್ರವಾಸೋದ್ಯಮ ಕ್ಷೇತ್ರದ ಸಮಗ್ರ ಕಾಯಕಲ್ಪ

ಮೂಲಸೌಕರ್ಯ ಅಭಿವೃದ್ಧಿಯಾದರೆ ಅನುಕೂಲ

ನಮ್ಮ ದೇಶದಲ್ಲಿ ಕೆಲವು ರಾಜ್ಯಗಳು ಕೇವಲ ಪ್ರವಾಸೋದ್ಯಮದಿಂದ ಜಿಡಿಪಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ಸಫಲವಾಗಿವೆ. ಉದಾಹರಣೆಗೆ ಹೇಳುವುದಾದರೆ ಗೋವಾದ ಶೇ.90ಕ್ಕಿಂತ ಹೆಚ್ಚು ಜಿಡಿಪಿ ಪ್ರವಾಸೋದ್ಯಮ ಕ್ಷೇತ್ರದಿಂದ ಬರುತ್ತಿದೆ. ಅಂದರೆ ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಸಮಾಜದ ಅಭಿವೃದ್ಧಿ ವೇಗ ಪಡೆಯಲು ಸಾಧ್ಯ. ನಮ್ಮ ಉಡುಪಿ ಜಿಲ್ಲೆಯ ಬಗ್ಗೆ ಹೇಳುವುದಾದರೆ ಹಲವಾರು ವೈವಿಧ್ಯಗಳು, ವಿಶಿಷ್ಟ ಆಚರಣೆಗಳು ಕಲೆ, ಸಂಸ್ಕೃತಿ, ಭಾಷಾ ವೈವಿಧ್ಯ ಬಹುಶಃ ಯಾವ ಜಿಲ್ಲೆಯಲ್ಲೂ ನೋಡಲು ಅಸಾಧ್ಯ. ಆದರೆ ರಾಜಕೀಯ ಇಚ್ಚಾ ಶಕ್ತಿಯ ಕೊರತೆಯಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಅಷ್ಟೊಂದು ಅಭಿವೃದ್ಧಿ ಆಗಿಲ್ಲ.
ನಮ್ಮ ಜಿಲ್ಲೆಯಲ್ಲಿ ಶ್ರೀಕೃಷ್ಣ ಮಠ ಸೇರಿದಂತೆ ಹಲವಾರು ಧಾರ್ಮಿಕ, ಸಾಂಸ್ಕೃತಿಕ ಮತ್ತು ಪರಿಸರದ ವೈವಿಧ್ಯದ ಸ್ಥಳಗಳಿದ್ದು, ಈ ಸ್ಥಳಗಳನ್ನು ಹುಡುಕಿಕೊಂಡು ದೇಶ-ವಿದೇಶದ ಬಹಳಷ್ಟು ಪ್ರವಾಸಿಗರು ಬರುತ್ತಿದ್ದಾರೆ. ಉಡುಪಿ ಜಿಲ್ಲೆಗೆ ದಿನಂಪ್ರತಿ ಸುಮಾರು ಒಂದು ಲಕ್ಷ ಪ್ರವಾಸಿಗರು ಬರುತ್ತಿದ್ದಾರೆ. ಆದರೆ ಹೆಚ್ಚಿನ ಜನರು ಬೇರೆ ಕ್ಷೇತ್ರಗಳಿಗೆ ಹೋಗುವಾಗ ಈ ಸ್ಥಳಗಳನ್ನು ನೋಡಿಕೊಂಡು ಹೋಗುತ್ತಿದ್ದಾರೆ. ನಮ್ಮಲ್ಲಿ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿದ್ದಲ್ಲಿ ಖಂಡಿತವಾಗಿ ಈ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯ.

ರಾಜಕೀಯ ಇಚ್ಛಾಶಕ್ತಿ ಬೇಕು

ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಯಾಗಬೇಕಾದರೆ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಇಚ್ಛಾಶಕ್ತಿಯನ್ನು ತೋರ್ಪಡಿಸಬೇಕಾಗಿದೆ. ಮುಖ್ಯವಾಗಿ ಈ ಕ್ಷೇತ್ರಗಳ ಅಭಿವೃದ್ಧಿಗಾಗಿ ನೀಲಿನಕಾಶೆಯನ್ನು ರೂಪಿಸಿಕೊಂಡು, ಈ ಮೂಲಕ ಅಭಿವೃದ್ಧಿಯ ವೇಗ ಹೆಚ್ಚಿಸಬೇಕಾಗಿದೆ. ಈಗಾಗಲೇ ಪಡುಬಿದ್ರೆಯ ಕಡಲತೀರಕ್ಕೆ ಬ್ಲೂಫ್ಲಾಗ್ ಬೀಚ್ ಮಾನ್ಯತೆ ಸಿಕ್ಕಿರುವುದು ಸಂತೋಷದ ವಿಷಯ. ಕಾಪು, ಮಲ್ಪೆ , ಹೂಡೆ ಬೀಚ್‌ಗಳಿಗೆ ಬ್ಲೂಫ್ಲಾಗ್ ಮಾನ್ಯತೆ ದೊರಕಿಸಲು ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿದೆ. ನಮ್ಮಲ್ಲಿ ಬಹಳಷ್ಟು ಸ್ಥಳಗಳು ಇತಿಹಾಸ ಪ್ರಸಿದ್ಧ ಕೂಡ ಆಗಿವೆ. ಬಾರ್ಕೂರು, ಉದ್ಯಾವರ ಮುಂತಾದ ಕ್ಷೇತ್ರಗಳು ಐತಿಹಾಸಿಕವಾಗಿ ಮಾನ್ಯತೆ ಪಡೆದಿವೆ. ಈ ನಿಟ್ಟಿನಲ್ಲಿ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಆದಲ್ಲಿ ಬಹಳಷ್ಟು ಜನರಿಗೆ ಉದ್ಯೋಗ ಸಿಗುವುದಲ್ಲದೆ ಆರ್ಥಿಕವಾಗಿಯೂ ಅಭಿವೃದ್ಧಿ ಸಾಧ್ಯ. ಪ್ರವಾಸೋದ್ಯಮ ಕೂಡ ಬಲಗೊಳ್ಳಲು ಸಾಧ್ಯ.

ಮೂಲಸೌಕಯ೯ಗಳಿಗೆ ಆದ್ಯತೆ ಸಿಗಲಿ

ಪ್ರವಾಸೋದ್ಯಮ ಕ್ಷೇತ್ರಕ್ಕೆ ಹಿನ್ನಡೆ ಆಗಲು ಮುಖ್ಯವಾಗಿ ಸರಿಯಾದ ರಸ್ತೆ ಸೇರಿದಂತೆ ಮೂಲಸೌಕಯ೯ಗಳಿಗೆ ಗಮನ ನೀಡದಿರಿವುದು. ಜನಪ್ರತಿನಿಧಿಗಳು ಈ ಬಗ್ಗೆ ಹೆಚ್ಚಿನ ಗಮನ ನೀಡಲಿ.ಸಂತೋಷದ ವಿಷಯವೆಂದರೆ ಕಳೆದ 3-4 ತಿಂಗಳಿನಿಂದ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕಾಕ೯ಳದಲ್ಲಿ ಈ ನಿಟ್ಟಿನಿಲ್ಲಿ ಅಭಿವೃದ್ಧಿ ನಡೆಯುತ್ತಿದೆ.
ಪ್ರವಾಸಿ ಸ್ಥಳಗಳಲ್ಲಿ ಮಾಹಿತಿ ಕೇಂದ್ರ ಸೇರಿದಂತೆ ಪ್ರವಾಸಿಗರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ಕ್ರಮ ವಹಿಸುವುದು, ಪ್ರವಾಸಿಗರಿಗೆ ಉತ್ತಮವಾದ ವಸತಿ, ಹೊಟೇಲ್ ವ್ಯವಸ್ಥೆ ಅಭಿವೃದ್ಧಿಗೊಳಿಸುವುದು, ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಸಿಗುವಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ, ಬಜೆಟ್‌ನಲ್ಲಿ ಹೆಚ್ಚಿನ ಹಣಕಾಸು ವ್ಯವಸ್ಥೆ ಮಾಡುವುದು, ಪ್ರವಾಸಿ ಸ್ಥಳಗಳ ಸೂಕ್ತವಾದ ನಿವ೯ಹಣೆಗೆ ಕ್ರಮ ತೆಗೆದುಕೊಳ್ಳುವುದು,ಗ್ರಾಮೀಣ ಭಾಗದಲ್ಲಿ ಪ್ರವಾಸಿ ಸ್ವಳ ಗಳ ಅಭಿವೃದ್ಧಿ, ಕೇಂದ್ರ ಮತ್ತು ರಾಜ್ಯ ಸಕಾ೯ರ ಸೇರಿ ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸಿ ಸ್ಥಳಗಳ ಸಮಗ್ರ ಅಭಿವೃದಿಗೊಳಿಸುವುದು,ಆಕಷ೯ಣಿಯಾದ ಕುದ್ರು, ದ್ವೀಪಗಳ ರಕ್ಷಣೆಗೆ ಒತ್ತು ನೀಡುವುದು, ಧಾಮಿ೯ಕ ಸ್ಥಳಗಳಲ್ಲಿ ಊಟ ಉಪಹಾರಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಮುಂತಾದ ಕ್ರಮಗಳನ್ನು ಕೈಗೊಂಡರೆ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ಸಾಧ್ಯ.
ರಾಘವೇಂದ್ರ ಪ್ರಭು, ಕವಾ೯ಲು
ಯುವ ಲೇಖಕ

































































































error: Content is protected !!
Scroll to Top