ವಾಲಿಬಾಲ್‌ : ಹನುಮಂತನಗರ ಫ್ರೆಂಡ್ಸ್ ಪ್ರಥಮ; ಮುದ್ದು ಫ್ರೆಂಡ್ಸ್ ಕಲ್ಯಾ ದ್ವಿತೀಯ

ಚೈತನ್ಯ ಮಿತ್ರ ಮಂಡಳಿ ಕಲ್ಯಾ ಆಶ್ರಯದಲ್ಲಿ ಜಿಲ್ಲಾಮಟ್ಟದ ಪಂದ್ಯಾಟ

ಕಾರ್ಕಳ: ಚೈತನ್ಯ ಮಿತ್ರ ಮಂಡಳಿ ಕಲ್ಯಾ ಇದರ ಆಶ್ರಯದಲ್ಲಿ ಜಿಲ್ಲಾಮಟ್ಟದ ಅಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಯಾ ಇದರ ವಠಾರದಲ್ಲಿ ಭಾನುವಾರ ಜರುಗಿತು. ಹನುಮಂತನಗರ ಫ್ರೆಂಡ್ಸ್ ಪ್ರಥಮ ಸ್ಥಾನ ಮತ್ತು ಮುದ್ದು ಫ್ರೆಂಡ್ಸ್ ಕಲ್ಯಾ ದ್ವಿತೀಯ ಸ್ಥಾನವನ್ನು ಪಡೆಯಿತು.
ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನೂಪ್ ಆಚಾರ್ಯ ವಹಿಸಿದ್ದರು. ಬಹುಮಾನಗಳನ್ನು ಉದ್ಯಮಿ ಅರುಣ್ ನಿಟ್ಟೆ ವಿತರಿಸಿದರು. ಅನಿಲ್ ಪೂಜಾರಿ ನಿಟ್ಟೆ, ಸುದೀಪ್ ಶೆಟ್ಟಿ ನಿಟ್ಟೆ, ಉದಯ ಪೂಜಾರಿ ಕೆಮ್ಮಣ್ಣು, ಎಸ್‌ಡಿಎಂಸಿ ಅಧ್ಯಕ್ಷ ಶೇಖರ್ ಆಚಾರ್ಯ, ಅಶೋಕ್ ಪೂಜಾರಿ, ಶಿವಾನಂದ ಶೆಟ್ಟಿ ಕಲ್ಯಾ ಉಪಸ್ಥಿತರಿದ್ದರು. ಈ ವಾಲಿಬಾಲ್ ಪಂದ್ಯಾಟದಲ್ಲಿ 22 ತಂಡಗಳು ಭಾಗವಹಿಸಿದ್ದವು.
ಕಿಶೋರ್ ಆಚಾರ್ಯ ಸ್ವಾಗತಿಸಿ, ಯತೀಶ್ ಎನ್. ವಂದಿಸಿದರು. ಗಣೇಶ್ ಆಚಾರ್ಯ ನಿರೂಪಿಸಿದರು.
ಬೆಳಗ್ಗೆ ಉದ್ಘಾಟನೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲುಸ್ತುವಾರಿ ಮತ್ತುಅಭಿವೃದ್ಧಿ ಸಮಿತಿ ಅಧ್ಯಕ್ಷ ಶೇಖರ್ ಆಚಾರ್ಯ ಕಲ್ಯಾ ದೀಪ ಬೆಳಗಿಸಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಚೈತನ್ಯ ಮಿತ್ರ ಮಂಡಳಿಯ ಉಪಾಧ್ಯಕ್ಷ ನೀಲೇಶ್ ಪೂಜಾರಿ ವಹಿಸಿದ್ದರು. ಹಿರಿಯ ವಾಲಿಬಾಲ್ ಆಟಗಾರ ಶಿವಾನಂದ ಶೆಟ್ಟಿ ಕಲ್ಯಾ ವಾಲಿಬಾಲ್ ಅಂಕಣವನ್ನು ಉದ್ಘಾಟಿಸಿದರು. ಚೈತನ್ಯ ಮಿತ್ರ ಮಂಡಳಿಯ ಗೌರವ ಅಧ್ಯಕ್ಷ ಅಶೋಕ್ ಪೂಜಾರಿ, ಚೈತನ್ಯ ಮಿತ್ರ ಮಂಡಳಿಯ ಮಾಜಿ ಅಧ್ಯಕ್ಷರಾದದ ಮಲ್ಲಿಕಾರ್ಜುನ್ ಎಸ್. ಎಸ್., ಕಿಶೋರ್ ಆಚಾರ್ಯ, ರವಿರಾಜ್ ನಾಯ್ಕ್, ಪವನ್ ಆಚಾರ್ಯ, ಸುಕೇಶ್ ಪೂಜಾರಿ, ಕೃಷ್ಣ ಆಚಾರ್ಯ ಉಪಸ್ಥಿತರಿದ್ದರು. ಸುಜಿತ್ ಕುಮಾರ್ ಸ್ವಾಗತಿಸಿ, ಯತೀಶ್ ಎನ್. ವಂದಿಸಿದರು. ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.



































































































error: Content is protected !!
Scroll to Top