ಜಿಂದಗೀ ಬಡಿಯಾ ಹೋನಿ ಚಾಹಿಯೇ, ಲಂಬಿ ನಹೀನ್ – ಹಿಂದಿ ಕವಿ ಗುಲ್ಜಾರ್

(ನಿನ್ನೆಯ ಸಂಚಿಕೆಯಿಂದ ಮುಂದುವರೆದಿದೆ)
ಸಾಧನೆಗೆ ವಯಸ್ಸು ಒಂದು ಮಿತಿ ಅಲ್ಲ ಎಂದು ನೂರಾರು ಜನರು ಈವರೆಗೆ ಸಾಬೀತು ಮಾಡಿದ್ದಾರೆ. ಅಂತಹ ಸಾಧಕರು ತಮ್ಮ ಅಲ್ಪಾಯುಷ್ಯವನ್ನು ಮಿತಿಯಾಗಿ ತೆಗೆದುಕೊಳ್ಳದೆ ಅದನ್ನೊಂದು ಉಡ್ಡಯನ ವೇದಿಕೆಯಾಗಿ ತೆಗೆದುಕೊಂಡರು. ತಮ್ಮ ಅಲ್ಪಾಯುಷ್ಯವನ್ನು ಮೊದಲೇ ತಿಳಿದ ಹಾಗೆ ವಿಶ್ರಾಂತಿ, ನಿದ್ದೆ ಎಲ್ಲವನ್ನೂ ಕಡಿಮೆ ಮಾಡಿ ವಿಶ್ವದ ಒಳಿತಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ಹಗಲು ರಾತ್ರಿ ದುಡಿದರು. ತಮ್ಮ ಅಲ್ಪಾಯುಷ್ಯದಲ್ಲಿ ಏನೆಲ್ಲಾ ಸಾಧಿಸಬೇಕೋ ಅದರ ನೂರು ಪಟ್ಟು ಸಾಧನೆ ಮಾಡಿದರು. ಸಾವು ಅವರ ಮನೆಯ ಬಾಗಿಲನ್ನು ತಟ್ಟುತ್ತಿದ್ದರೂ ಒಂದಿಷ್ಟೂ ಭರವಸೆಗಳನ್ನು ಕಳೆದುಕೊಳ್ಳದೆ ಆಶಾವಾದಿಗಳಾಗಿ ಮುಂದುವರೆದರು.

ಅಂಥವರ ಪಟ್ಟಿ

ಸಾವನ್ನು ಗೆದ್ದು ಬೀಗಿದವರು
೧೬) ಪಾರ್ಲಿಮೆಂಟ್ ಭವನದಲ್ಲಿ ಬಾಂಬ್ ಎಸೆದು ಬ್ರಿಟಿಷ್ ಸರಕಾರವನ್ನು ನಡುಗಿಸಿದ ಸರ್ದಾರ್ ಭಗತ್ ಸಿಂಗ್ ನಗುನಗುತ್ತಾ ಗಲ್ಲಿಗೇರಿದ್ದು 24ನೇ ವಯಸ್ಸಿನಲ್ಲಿ! ಅವನ ಜೊತೆ ಗಲ್ಲಿಗೇರಿದ ಬಟುಕೇಶ್ವರ ದತ್ತಾ ಮತ್ತು ರಾಜಗುರು ಅವರೂ ಕೂಡ ಅವನ ಆಸುಪಾಸಿನ ವಯಸ್ಸಿನವರು!

೧೭) ಮಹಾನ್ ಕ್ರಾಂತಿಕಾರಿ ಮದನ್ ಲಾಲ್ ಧಿಂಗ್ರಾ ತನ್ನ 26ನೆಯ ವರ್ಷಕ್ಕೆ ಒಂದಿಷ್ಟೂ ವಿಶಾದ ಉಳಿಸಿಕೊಳ್ಳದೆ ಗಲ್ಲಿಗೇರಿದ್ದ!

೧೮) ಭಾರತದ ಮೊಟ್ಟಮೊದಲ ಆದಿವಾಸಿ ಕ್ರಾಂತಿಕಾರಿ, ಬೀದಿ ಬದಿಯ ಮತ್ತು ಗುಡ್ಡಗಾಡು ಹೋರಾಟಗಳ ಮೂಲಕ ಬ್ರಿಟಿಷ್ ಸರಕಾರವನ್ನು ನಡುಗಿಸಿದ್ದ ಬಿಹಾರದ ಬಿರ್ಸಾ ಮುಂಡಾ ಆತನ ವಯಸ್ಸು 25ಕ್ಕೇ ಮುಗಿದಿತ್ತು!

೧೯) ಬ್ರಿಟಿಷ್ ಸರಕಾರವು ಬಂಧಿಸಿದ ಭಾರತೀಯ ಸೈನಿಕರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ವಿರೋಧಿಸಿ ಸೆರೆಮನೆಯಲ್ಲಿ 63 ದಿನಗಳ ಅಖಂಡ ಉಪವಾಸ ಸತ್ಯಾಗ್ರಹವನ್ನು ನಡೆಸಿ ಪ್ರಾಣಾರ್ಪಣೆ ಮಾಡಿದ ಕ್ರಾಂತಿಕಾರಿ ಜತೀಂದ್ರನಾಥ್ ದಾಸ್ ಹುತಾತ್ಮನಾದದ್ದು 25ನೆಯ ವರ್ಷದಲ್ಲಿ!

೨೦) ಹಲವು ಶ್ರೇಷ್ಟವಾದ ತಮಿಳು ಮಹಾಕಾವ್ಯಗಳನ್ನು ಬರೆದು ತಮಿಳು ರಾಷ್ಟ್ರಕವಿ ಎಂದೇ ಕರೆಸಿಕೊಂಡ ಸುಬ್ರಹ್ಮಣ್ಯ ಭಾರತೀ 38ನೆಯ ವರ್ಷಕ್ಕೆ ಅಸ್ತಂಗತರಾದರು!

೨೧) ವಿವೇಕಾನಂದರಿಗೆ ಮತ್ತು ಭಾರತೀಯ ಮಹಿಳೆಯರಿಗೆ ಸ್ಫೂರ್ತಿ ದೇವತೆಯಾಗಿ ಮೆರೆದ ಸಿಸ್ಟರ್ ನಿವೇದಿತಾ 43ನೆಯ ವರ್ಷಕ್ಕೇ ತನ್ನ ಬದುಕು ಮುಗಿಸಿದರು!

೨೨) ಕಾರ್ಗಿಲ್ ಯೋಧ ‘ದಿಲ್ ಮಾಂಗೇ ಮೋರ್’ ಎಂದು ಅಪಾಯಗಳನ್ನು ಹೆಗಲಿಗೇರಿಸಿಕೊಂಡು ಹುತಾತ್ಮರಾದ ಕ್ಯಾಪ್ಟನ್ ವಿಕ್ರಂ ಭಾತ್ರಾ ಕೊನೆಯ ಉಸಿರೆಳೆದಾಗ ಅವರ ವಯಸ್ಸು ಕೇವಲ 24 ಆಗಿತ್ತು!

೨೩) ಹಿಂದೀ ಸಿನೆಮಾದ ಲೆಜೆಂಡ್ ನಟಿಯರಾದ ಮತ್ತು ತನ್ನ ಸೌಂದರ್ಯ ಮತ್ತು ಅಭಿನಯದ ಮೂಲಕ ಬಹುದೊಡ್ಡ ಪ್ರಭಾವಲಯವನ್ನು ನಿರ್ಮಿಸಿದ ಮಧುಬಾಲಾ (36), ಸ್ಮಿತಾ ಪಾಟೀಲ್ (31), ಮೀನಾಕುಮಾರಿ ( 30) ಅಲ್ಪಾಯುಷಿಗಳೇ ಆಗಿದ್ದವರು!

೨೪) ಹಾಗೆಯೇ ಕನ್ನಡದ ಮಹಾ ನಟಿಯರಾದ ಕಲ್ಪನಾ(35) ಮಂಜುಳಾ (38) ಸೌಂದರ್ಯ(32) ಇವರೆಲ್ಲರೂ ಅಲ್ಪಾಯುಷಿಗಳೇ ಆಗಿದ್ದವರು! ಅತ್ಯಂತ ಕಡಿಮೆ ಅವಧಿಯಲ್ಲಿ ಜನಪ್ರಿಯತೆಯ ಎತ್ತವರನ್ನು ಅವರು ತಲುಪಿದವರು!

೨೫) ಖ್ಯಾತ ಗಗನ ಅನ್ವೇಷಕಿ ಕಲ್ಪನಾ ಚಾವ್ಲಾ ತನ್ನ ಬಾಲ್ಯದ ಕನಸುಗಳನ್ನು ಬೆನ್ನಟ್ಟಿ ಆಕಾಶ ನೌಕೆಯಲ್ಲಿ ಸುಟ್ಟು ಭಸ್ಮವಾದಾಗ ಅವರ ವಯಸ್ಸು 40 ವರ್ಷ ಮಾತ್ರ ಆಗಿತ್ತು! ಆಕೆಯ ಸಾಧನೆಯು ಅಲ್ಪಾಯುಷಿ ಅಲ್ಲ ಎಂದು ನಮಗೆ ಅನ್ನಿಸುತ್ತದೆ!

೨೬) ಭಾರತ ಚೀನಾ ರಾಷ್ಟ್ರಗಳ ಸಂಬಂಧಗಳನ್ನು ಉತ್ತಮಗೊಳಿಸಲು ತನ್ನ ಪ್ರಾಣವನ್ನೇ ಬಲಿಯಾಗಿ ಕೊಟ್ಟ ಭಾರತೀಯ ವೈದ್ಯ ಡಾ. ದ್ವಾರಕಾನಾಥ್ ಕೋಟ್ನೀಸ್ ಚೀನಾದಲ್ಲಿ ಮರಣ ಅಪ್ಪಿಕೊಂಡಾಗ ಅವರ ವಯಸ್ಸು ಕೇವಲ 32 ಆಗಿತ್ತು!

೨೭) ಭಾರತೀಯ ಸೈನಿಕ ದೇಶದ ಘನತೆಯನ್ನು ಉಳಿಸಲು ಪ್ರಾಣಾರ್ಪಣೆ ಮಾಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ವೀರಮರಣ ಅಪ್ಪಿಕೊಂಡದ್ದು 23ನೆಯ ವಯಸ್ಸಿನಲ್ಲಿ!

೨೭) ಭಾರತದ ಮೊದಲ ಮೊತ್ತ ಮಹಿಳಾ ವೈದ್ಯೆ ಡಾಕ್ಟರ್ ಆನಂದೀ ಬಾಯಿ ಜೋಶಿ ಕೊನೆಯ ಉಸಿರೆಳೆದಾಗ ಅವರ ವಯಸ್ಸು 23 ಮಾತ್ರ ಆಗಿತ್ತು!

೨೮) ಗಗನಸಖಿ ಆಗಿದ್ದುಕೊಂಡು ಭಯೋತ್ಪಾದಕರ ಜೊತೆಗೆ ಏಕಾಂಗಿಯಾಗಿ ಹೋರಾಡಿ ತನ್ನ ಪ್ರಾಣವನ್ನು ಕಳೆದುಕೊಂಡ ನೀರಜಾ ಭಾನೋಟ್ ಹುತಾತ್ಮರಾದಾಗ ಆಕೆಯ ವಯಸ್ಸು 22 ಮಾತ್ರ ಆಗಿತ್ತು!

ಭರತವಾಕ್ಯ
ಭಾರತದ ಸಾವಿರಾರು ಕ್ರಾಂತಿಕಾರಿಗಳು, ಸೈನಿಕರು ಎಂದಿಗೂ ತಮಗೆ ಪೂರ್ಣ ಆಯಸ್ಸು ಕೊಡು ದೇವರೇ ಎಂದು ಪ್ರಾರ್ಥನೆ ಮಾಡಿದವರೇ ಅಲ್ಲ! ಸಾವನ್ನು ಸ್ವಾಗತಿಸುವಾಗಲೂ ನಗುನಗುತ್ತಾ ಎದೆ ಒಡ್ಡಿದವರು. ಇದೆಲ್ಲವನ್ನೂ ನೆನೆದಾಗ ಗುಲ್ಜಾರ್ ಅವರ ವಾಕ್ಯವು ಎಷ್ಟು ಅರ್ಥಪೂರ್ಣ ಎಂದು ನಮಗೆ ಅನ್ನಿಸುತ್ತದೆ – ಜಿಂದಗೀ ಬಡಿಯಾ ಹೊನೀ ಚಾಹಿಯೇ, ಲಂಬಿ ನಹೀನ್!



































































































error: Content is protected !!
Scroll to Top