ಕಾರ್ಕಳ : ಕಳೆದ 36 ವರ್ಷದಿಂದ ತಲೆಮೆರೆಸಿಕೊಂಡಿದ್ದ ಆರೋಪಿಯನ್ನು ಕಾರ್ಕಳ ನಗರ ಪೊಲೀಸರು ಜು. 27ರಂದು ಬಂಧಿಸಿದ್ದಾರೆ. ಕಾರ್ಕಳ ರಾಮಸಮುದ್ರ ನಿವಾಸಿ ಪೀಟರ್ ಆಗಸ್ಟಿನ್ ಮಾರ್ಟೀಸ್ (60) ಬಂಧಿತ ಆರೋಪಿ. ಈತ 92/1989 ಕಲಂ: 143, 147, 148, 447, 448, 323, 326 ಜೊತೆಗೆ 149 ಐಪಿಸಿ ಮತ್ತು ಪಿಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಎಲ್.ಪಿ.ಸಿ 14/2004 ಪ್ರಕರಣದಲ್ಲಿ 36 ವರ್ಷದಿಂದ ತಲೆಮೆರೆಸಿಕೊಂಡಿದ್ದನು.
ಕಾರ್ಕಳ ಉಪ ವಿಭಾಗದ ಉಪಾಧೀಕ್ಷಕರ ಮಾರ್ಗದರ್ಶನದಂತೆ, ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಉಡುಪಿ ಮಹಿಳಾ ಠಾಣಾ ಪೊಲೀಸ್ ನಿರೀಕ್ಷಕರ ನಿರ್ದೇಶನದಂತೆ ಕಾರ್ಕಳ ನಗರ ಠಾಣಾ ಉಪನಿರೀಕ್ಷಕ ಮುರಳೀಧರ ನಾಯ್ಕ್ ಹಾಗೂ ಸಿಬ್ಬಂದಿ ಹೆಚ್ಸಿ 2096 ಲೋಕೇಶ್, ಹೆಚ್ಸಿ 83 ಸಂಜಯ್ ಹಾಗೂ ಹೆಚ್ಸಿ 1148 ರಂಜಿತ್ ಶೆಟ್ಟಿ ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಕಾರ್ಕಳ ಪಿ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.







































