ಬೆಂಗಳೂರು, ಆ. 7: ವಕ್ಫ್ ಮಂಡಳಿಯ ಅಧ್ಯಕ್ಷ ಡಾ.ಮೊಹಮ್ಮದ್ ಯೂಸುಫ್ (74) ಅವರು ಅಲ್ಪಕಾಲದ ಅನಾರೋಗ್ಯದ ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆ.7ರಂದು ನಿಧನರಾಗಿದ್ದಾರೆ.
ಉದ್ಯಮಿಯಾಗಿದ್ದ ಡಾ.ಯೂಸುಫ್ ಸಮಾಜ ಸೇವಕ ಮತ್ತು ಮಾನವತಾವಾದಿಯಾಗಿ ಗುರುತಿಸಿಕೊಂಡಿದ್ದರು. ಸರಕಾರಿ ನೌಕರಿಯಲ್ಲಿದ್ದ ಅವರು ಬಳಿಕ ಸ್ವಯಂ ನಿವೃತ್ತಿ ಪಡೆದು ಉದ್ಯಮಗಳನ್ನು ಸ್ಥಾಪಿಸಿದ್ದರು. ಕಳೆದ ಜನವರಿಯಲ್ಲಿ ಅವರು ವಕ್ಫ್ ಮಂಡಳಿ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದರು.