ಯಾರಾಗಬಹುದು ಬಿಸಿಸಿಐ ಪ್ರಾಯೋಜಕರು?

ಟೈಟಲ್‌ ಫ್ರಾಂಚೈಸಿಗಾಗಿ ನಡೆಯುತ್ತಿದೆ ದಿಗ್ಗಜ ಕಂಪನಿಗಳ ನಡುವೆ ಪೈಪೋಟಿ

ಗಲ್ಫ್‌ ದೇಶದಲ್ಲಿ ಈ ಸಲ ನಡೆಯುವ  ಐಪಿಎಲ್ ಕೂಟದ ಪ್ರಾಯೋಜಕರು ಯಾರು? ಕ್ರಿಕೆಟ್‌ ಅಭಿಮಾನಿಗಳ ತಲೆತಿನ್ನುತ್ತಿರುವ  ಈ ಪ್ರಶ್ನೆ ಬಗ್ಗೆ ಬಿಸಿಸಿಐಯೂ ತಲೆ ಕೆಡಿಸಿಕೊಂಡಿದೆ.

ಐಪಿಎಲ್‌  ಆರಂಭಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಬಿಸಿಸಿಐ ಪಾಲಿಗೆ  ಇದೊಂದು ಹೊಸ ಸವಾಲಾಗಿ ಪರಿಣಮಿಸಿದೆ.

ಲಡಾಖ್‌ ಗಡಿಯಲ್ಲಿ ಚೀನ ಕಿರಿಕ್‌ ತೆಗೆದು ರಂಪಾಟ ಮಾಡಿದ ಬಳಿಕ ಚೀನ ಉತ್ಪನ್ನಗಳನ್ನು ನಿಷೇಧಿಸಬೇಕೆಂಬ ಕೂಗು ಮುಗಿಲು ಮುಟ್ಟಿದೆ. ಈ ಸಂದರ್ಭದಲ್ಲಿ ಬಿಸಿಸಿಐ ಪ್ರಾಯೋಜಕರಾಗಿರುವ ಚೀನದ ವಿವೊ ಮೊಬೈಲ್‌ ಕಂಪನಿಯ ಮೇಲೂ ಕೆಲವು ರಾಷ್ಟ್ರೀಯವಾದಿಗಳ ಕೆಂಗಣ್ಣು ಬಿದ್ದಿದೆ. ಸಂಘ ಪರಿವಾರದ ಅಂಗ ಸಂಸ್ಥೆಯೊಂದು ನೇರವಾಗಿಯೇ ಬಿಸಿಸಿಐಗೆ ವಿವೊ ಪ್ರಾಯೋಜಕತ್ವದಿಂದ ಹಿಂದೆ ಸರಿಯುವಂತೆ ಬೆದರಿಕೆಯೊಡ್ಡಿದ್ದು, ಬಳಿಕ ಸ್ವತಃ ವಿವೊ ಈ ಸಲ  ಐಪಿಎಲ್‌ ಜೊತೆ ತಾನಿಲ್ಲ ಎಂದು ಹೇಳಿದೆ.

ಟೈಟಲ್ ಫ್ರಾಂಚೈಸಿಯಿಂದ ವಿವೊ  ಕಿತ್ತೊಗೆಯಬೇಕೆಂಬ ಒತ್ತಡಕ್ಕೆ ಮಣಿದು ವಿವೊ ಐಪಿಎಲ್ 2020ಯಿಂದ ಹೊರಬಂದಿದೆ. ಹೀಗಾಗಿ ಹೊಸ ಶೀರ್ಷಿಕೆ ಪ್ರಾಯೋಜಕರಿಗಾಗಿ ಹುಡುಕಾಟ ನಡೆಯುತ್ತಿದೆ.

ಮಾರುಕಟ್ಟೆಯ ತಜ್ಞರ ಪ್ರಕಾರ ಈ ಬಾರಿಯ ಪ್ರಾಯೋಜಕತ್ವವನ್ನು  ಇ-ಕಾಮರ್ಸ್ ಅಥವಾ ಇ-ಲರ್ನಿಂಗ್ ಕಂಪನಿಗಳು ತೆಕ್ಕೆಗೆ ಹಾಕಿಕೊಳ್ಳಲು ಪೈಪೋಟಿಗೆ ಇಳಿದಿವೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಂತಿಮ ಚಿತ್ರಣ ಲಭ್ಯವಾಗಬೇಕಾಗಿದೆ. ಹೀಗಾಗಿ ಇದು ಸಾಕಷ್ಟು ಕುತೂಹಲವನ್ನು ಮೂಡಿಸಿದೆ.

ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ ಅಮೆಜಾನ್, ಅನಕಾಡೆಮಿ ಮತ್ತು ಮೈ ಸರ್ಕಲ್ 11 ನಂತಹವುಗಳು ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಪಡೆಯುವ ಮುಂಚೂಣಿ ಕಂಪನಿಗಳಾಗಿ ಕಾಣಿಸಿಕೊಂಡಿವೆ ಎನ್ನಲಾಗುತ್ತಿದೆ. ವಿವೊ ಪ್ರಾಯೋಜಕತ್ವ ರದ್ದಾಗಿರುವುದರಿಂದ ನಷ್ಟಕ್ಕೊಳಗಾಗಿರುವ 440 ಕೋಟಿ ರೂಪಾಯಿಗೆ ಉತ್ತಮ ವ್ಯವಹಾರ ದೊರೆಯುವ ಭರವಸೆಯಲ್ಲಿದೆ. ಬೈಜುಸ್ ಮತ್ತು ಅನಾಕಾಡೆಮಿಯ ಹೆಸರುಗಳು ಸಂಭಾವ್ಯ ಬಿಡ್ಡರ್‌ಗಳಾಗಿ ಹೊರಹೊಮ್ಮಿವೆ ಎಂದು ವರದಿಯಾಗಿದೆ. ಆದರೆ ಡ್ರೀಮ್ 11 ಮತ್ತು ಮೈ ಸರ್ಕಲ್ 11 ನಂತಹ ಫ್ಯಾಂಟಸಿ ಕ್ರೀಡಾ ವೇದಿಕೆಗಳು ಸಹ ಕಣದಲ್ಲಿವೆ.

ದೀಪಾವಳಿ ಸಮಯವಾಗಿರುವ ಕಾರಣ ಈ ಅಮೆಜಾನ್ ಈ ಅವಧಿಯನ್ನು ಸದುಪಯೋಗಪಡಿಸಿಕೊಳ್ಳಲು ಉತ್ಸುಕವಾಗಿದೆಯೆಂದು ಹೇಳಲಾಗುತ್ತಿದೆ. ದೀಪಾವಳಿಗೆ ಎರಡು ತಿಂಗಳು ಮುನ್ನ ಆರಂಭವಾಗುವ ಈ ಬಹುಕೋಟಿ ಟೂರ್ನಿಯಿಂದ ಮಾರುಕಟ್ಟೆಯಲ್ಲಿ ಅಮೆಜಾನ್ ಸಂಜಲನ ಮೂಡಿಸಲು ಸಾಧ್ಯವಾಗಹುದೆಂಬ ಲೆಕ್ಕಾಚಾರಗಳಿವೆ. ಆದರೆ ಅಂತಿಮ ಹಂತದಲ್ಲಿ ಭಾರತ ಬೃಹತ್ ಕಂಪಿನಿಯಾಗಿರುವ ಜಿಯೊ ಈ ಸ್ಪರ್ಧಾ ಕಣಕ್ಕಿಳಿದು ಡಾರ್ಕ್ ಹಾರ್ಸ್ ಆಗಿ ಹೊರಹೊಮ್ಮುವ ಸಾಧ್ಯತೆಗಳ ಬಗ್ಗೆಯೂ ವಿಶ್ಲೇಷಣೆಗಳು ಈ ಹಂತದಲ್ಲಿ ನಡೆಯುತ್ತಿದೆ.

error: Content is protected !!
Scroll to Top