ಮಲ್ಪೆಯಲ್ಲಿ ಗುಜರಿ ಆರಿಸುವ ವ್ಯಕ್ತಿಯ ಹತ್ಯೆ
ಮಲ್ಪೆ: ಇಂದು ಮುಂಜಾನೆ ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ. ಮೃತನನ್ನು ಪರಮೇಶ್ ಎಂದು ಗುರುತಿಸಲಾಗಿದೆ. ಪರಮೇಶ್ ಅವರು ಗುಜರಿ ಆರಿಸುವ ಕೆಲಸ ಮಾಡುತ್ತಿದ್ದರು. ಪ್ರತಿನಿತ್ಯ ತಾವು ನಿದ್ದೆ ಮಾಡುತ್ತಿದ್ದ ಸ್ಥಳದಲ್ಲೇ ಅವರನ್ನು ಹತ್ಯೆ ಮಾಡಲಾಗಿದೆ. ಮಲ್ಪೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಲ್ಪೆಯಲ್ಲಿ ಗುಜರಿ ಆರಿಸುವ ವ್ಯಕ್ತಿಯ ಹತ್ಯೆ Read More »









