ವ್ಯವಹಾರದ ಹಣ ದುರುಪಯೋಗಪಡಿಸಿಕೊಂಡ ಮ್ಯಾನೇಜರ್

ಕಾರ್ಕಳ : ವ್ಯವಹಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಮಾಲಕನು ಮ್ಯಾನೇಜರ್‌ ಬಳಿ ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವ ಘಟನೆ ಮೇ 7ರಂದು ಜೋಡುರಸ್ತೆಯ ಟಯರ್ ಅಂಗಡಿಯಲ್ಲಿ ನಡೆದಿದೆ.

ಗುರುವಾಯನಕೆರೆಯ ಅಪ್ಸರ್‌ ಪಿ.ಕೆ. ಅವರು ಜೋಡುರಸ್ತೆಯಲ್ಲಿ ಟೈರ್‌ ಮಾರ್ಟ್‌ ಎಂಬ ಹೆಸರಿನ ಟಯರ್ ಅಂಗಡಿಯನ್ನು ನಡೆಸಿಕೊಂಡಿದ್ದು, ಈ ಅಂಗಡಿಯಲ್ಲಿ ಆಪಾದಿತ ಮಹಮದ್‌ ಸಿನಾನ್‌ ಮ್ಯಾನೇಜರ್‌ ಆಗಿ ಕೆಲಸ ಮಾಡಿಕೊಂಡಿರುತ್ತಾನೆ. ಮಹಮದ್‌ ಸಿನಾನ್‌ ಅಂಗಡಿ ವ್ಯವಹಾರದ ಹಣವನ್ನು ದುರುಪಯೋಗ ಮಾಡಿಕೊಂಡ ಬಗ್ಗೆ ಆತನಲ್ಲಿ ವಿಚಾರಿಸಿದಾಗ ಆತನು ಉಡಾಫೆಯಾಗಿ ಹಣವನ್ನು ತೆಗೆದಿಲ್ಲ ಎಂದು ಹೇಳಿರುತ್ತಾನೆ. ಮೇ 7ರಂದು ಆಪಾದಿತನ ತಮ್ಮ ಸಾಹಿಲ್‌ ಎಂಬುವನು ಅಪ್ಸರ್‌ ಪಿ.ಕೆ. ಅವರ ಅಂಗಡಿಯಲ್ಲಿ ಕೆಲಸ ಮಾಡುವ ರಿಫಾದ್‌ ಎಂಬವರ ಮೊಬೈಲ್‌ಗೆ ಕರೆಮಾಡಿ ಅಪ್ಸರ್‌ ಪಿ.ಕೆ. ಅವರಿಗೆ ಹಾಗೂ ಅವರ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು, ಅಂಗಡಿಯನ್ನು ಬೆಂಕಿ ಹಾಕಿ ಸುಟ್ಟುಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೆ ಸಂಜೆ ಕಾರ್ಕಳ ಪೊಲೀಸ್‌ ಠಾಣೆಯ ಹೊರಗಡೆ ರಸ್ತೆಯಲ್ಲಿ ನಿಂತುಕೊಂಡಿದ್ದಾಗ ಆಪಾದಿತ ಮಹಮದ್‌ ಸಿನಾನ್‌ ಜೊತೆ ಬಂದಿದ್ದ ಅಕೀಬ್‌ ಎಂಬವನು ಅಪ್ಸರ್‌ ಪಿ.ಕೆ. ಅವರನ್ನು ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.































































































error: Content is protected !!
Scroll to Top