ಭಾರತಕ್ಕೆ Su-57 ಸ್ಟೆಲ್ತ್ ಫೈಟರ್ ಜೆಟ್ ಆಫರ್‌ ನೀಡಿದ ಪುಟಿನ್‌

5ನೇ ತಲೆಮಾರಿನ ಫೈಟರ್‌ ಜೆಟ್‌ ಹುಡುಕಾಟದಲ್ಲಿರುವ ಭಾರತ

ಮಾಸ್ಕೋ/ನವದೆಹಲಿ: ಭಾರತೀಯ ವಾಯುಪಡೆಗೆ (IAF) ‘ತೇಜಸ್‌’ ಲಘು ಯುದ್ಧ ವಿಮಾನಗಳ ಸೇರ್ಪಡೆಯ ಯಶಸ್ಸಿನ ನಂತರ ಕೇಂದ್ರ ಸರ್ಕಾರ ಸಾವಿರ ಕೋಟಿ ವೆಚ್ಚದಲ್ಲಿ 5ನೇ ತಲೆಮಾರಿನ ಯುದ್ಧ ವಿಮಾನಗಳನ್ನ ದೇಶೀಯವಾಗಿ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದೆ. ಈ ಹೊತ್ತಿನಲ್ಲೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭಾರತಕ್ಕೆ ಬಿಗ್‌ ಆಫರ್‌ವೊಂದನ್ನ ನೀಡಿದ್ದಾರೆ.
ಸುಖೋಯ್ Su-57 5ನೇ ತಲೆಮಾರಿನ ಸ್ಟೆಲ್ತ್‌ ಯುದ್ಧವಿಮಾನಕ್ಕೆ (Fighter Jet) ಸಂಬಂಧಿಸಿದಂತೆ ಭರ್ಜರಿ ಆಫರ್‌ವೊಂದನ್ನ ನೀಡಿದ್ದಾರೆ.

ಒಂದು ದಿನದ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪುಟಿನ್‌ Su-57 5ನೇ ತಲೆಮಾರಿನ ಫೈಟರ್‌ ಜೆಟ್‌ ವಿಮಾನವನ್ನು ಭಾರತಕ್ಕೆ ಪೂರೈಸಲು ರಷ್ಯಾ ಸಿದ್ಧವಿದೆ. ಇದರೊಂದಿಗೆ ಭಾರತದೊಂದಿಗೆ ಜಂಟಿಯಾಗಿ ಸುಖೋಯ್‌ Su-57 ಅನ್ನು ಅಭಿವೃದ್ಧಿಪಡಿಸಲು ರಷ್ಯಾ ಸಿದ್ಧವಾಗಿದೆ. ನಿರ್ಣಾಯಕ ತಂತ್ರಜ್ಞಾನಗಳನ್ನು ಹಂಚಿಕೊಳ್ಳಲು ರೆಡಿಯಿದೆ ಎಂದು ಹೇಳಿದ್ದಾರೆ.
ಇದರಲ್ಲಿ ನಮಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಪುಟಿನ್ ಹೇಳಿದ್ದಾರೆ. ಇದು ಭಾರತದೊಂದಿಗೆ ಇರುವ ರಕ್ಷಣಾ ಸಂಬಂಧಗಳನ್ನ ಇನ್ನಷ್ಟು ಬಲಪಡಿಸಲು ರಷ್ಯಾದ ಇಚ್ಛೆಯನ್ನು ಸೂಚಿಸುತ್ತದೆ.
‌
ಸದ್ಯ ಭಾರತದ 5ನೇ ತಲೆಮಾರಿನ ಸುಧಾರಿತ ಮಧ್ಯಮ ಶ್ರೇಣಿಯ ಯುದ್ಧ ವಿಮಾನಗಳನ್ನು (ಎಎಂಸಿಎ) ತಯಾರಿಸುವ ಯೋಜನೆ ಅಭಿವೃದ್ಧಿ ಹಂತದಲ್ಲಿದೆ. ಫೈಟರ್‌ ಜೆಟ್‌ಗಳನ್ನ ದೇಶೀಯವಾಗಿ ನಿರ್ಮಿಸುವ 15 ಸಾವಿರ ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ. ಈ ಯೋಜನೆಯನ್ವಯ 2030 ರ ದಶಕದ ಮಧ್ಯಭಾಗದಲ್ಲಿ ಸೇವೆಗೆ ಪ್ರಸ್ತುತಪಡಿಸುವ ಸಾಧ್ಯತೆಗಳಿವೆ.

ಈ ಮಧ್ಯೆ ಪಾಕಿಸ್ತಾನವು ಚೀನಾದಿಂದ ಶೆನ್ಯಾಂಗ್ J-35AE ಸ್ಟೆಲ್ತ್ ಫೈಟರ್‌ಗಳನ್ನ ಖರೀದಿಸಲು ಮುಂದಾಗಿರುವುದು ಕಳವಳ ಹೆಚ್ಚಿಸಿದೆ. ಇಂತಹ ಸನ್ನಿವೇಶದಲ್ಲಿ ಭಾರತವು ವಾಯುಪಡೆಗೆ ಬಲ ತುಂಬಲು 5ನೇ ತಲೆಮಾರಿನ ಯುದ್ಧವಿಮಾನಕ್ಕಾಗಿ ಹುಡುಕಾಟ ನಡೆಸುತ್ತಿರುವಾಗಲೇ ಪುಟಿನ್‌ ಈ ಆಫರ್‌ ನೀಡಿದ್ದಾರೆ.

















































error: Content is protected !!
Scroll to Top