Author name: Newskarkala Desk

ಗಡಿ ಸಂಘರ್ಷ- ಲಡಾಖ್‌ಗೆ ಮೋದಿ ಹಠಾತ್ ಭೇಟಿ

ಗಡಿ ಉದ್ವಿಗ್ನತೆ ಬಗ್ಗೆ ಜೂನ್ 5 ರಿಂದಲೂ ಭಾರತ ಮತ್ತು ಚೀನಾ ದೇಶಗಳ ಸೇನಾ ಅಧಿಕಾರಿಗಳ ನಡುವೆ ಮಾತುಕತೆ ನಡೆಯುತ್ತಲೇ ಇದೆ.  ದಿಲ್ಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ಸೈನಿಕರ ಸಂಘರ್ಷ ಉಂಟಾದ ಬಳಿಕ ಹಾಗೂ ಗಡಿಯಲ್ಲಿ ಎರಡೂ ದೇಶಗಳ ಹೆಚ್ಚಿನ ಸೇನಾ ಬಲ ನಿಯೋಜನೆಗೊಂಡು ಉದ್ವಿಗ್ನತೆ ಹೆಚ್ಚಾದ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ದಿಢೀರನೆ ಗಡಿ ಭಾಗವಾದ ಲೇಹ್ ಗೆ ಭೇಟಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಗಡಿ ಉದ್ವಿಗ್ನತೆ ಬಗ್ಗೆ ಜೂನ್ 5 ರಿಂದಲೂ

ಗಡಿ ಸಂಘರ್ಷ- ಲಡಾಖ್‌ಗೆ ಮೋದಿ ಹಠಾತ್ ಭೇಟಿ Read More »

ಕೊರೊನಾ ಯಕ್ಷ ಜಾಗೃತಿ ಯಕ್ಷಗಾನ ಬೊಂಬೆಯಾಟ ಶೀಘ್ರದಲ್ಲೇ ಬಿಡುಗಡೆ

    ಕಳೆದ ಮಾರ್ಚ್ ತಿಂಗಳಲ್ಲಿ ಕೊರೊನಾ ಯಕ್ಷ ಜಾಗೃತಿ ಯಕ್ಷಗಾನ ಪ್ರದರ್ಶನವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಮಾಡಿ ವಿಶ್ವ ವಿಖ್ಯಾತಿಯಾದ ಸಿರಿಬಾಗಿಲು ವೆಂಕಪ್ಪಯ್ಯ  ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕಾಸರಗೋಡು  ಸಂಸ್ಥೆಯು ತಮ್ಮ  ಮುಂದಿನ  ಸಂಯೋಜನೆಯು,  ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಸಹಯೋಗ, ಪ್ರದರ್ಶನದೊಂದಿಗೆ  ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರ ಸಹಕಾರದೊಂದಿಗೆ ನಿರ್ಮಾಣವಾಗುತ್ತಿರುವ ಕೊರೊನ ಯಕ್ಷ ಜಾಗೃತಿ ಬೊಂಬೆಯಾಟ ಪ್ರದರ್ಶನ ವನ್ನು ಸಾಮಾಜಿಕ ಜಾಲತಾಣಗಳ ಮೂಲಕ ದೇಶ ವಿದೇಶಗಳಲ್ಲಿ ಪ್ರಚುರಪಡಿಸುವ ಕಾರ್ಯದ ಪೂರ್ವ ಸಿದ್ಧತೆಗಳು ಭರದಿಂದ

ಕೊರೊನಾ ಯಕ್ಷ ಜಾಗೃತಿ ಯಕ್ಷಗಾನ ಬೊಂಬೆಯಾಟ ಶೀಘ್ರದಲ್ಲೇ ಬಿಡುಗಡೆ Read More »

ಆನ್ಲೈನ್ ಸಾಧ್ಯತೆ ಬಿಚ್ಚಿಟ್ಟ ಯಕ್ಷಸಾಂಗತ್ಯ ಸಪ್ತಕ

ಸಿಬಂತಿ ಪದ್ಮನಾಭ ಸಪ್ತಾಹಗಳು ಯಕ್ಷಗಾನ ಕ್ಷೇತ್ರಕ್ಕೆ ಹೊಸತಲ್ಲ. ಆದರೆ ಉಜಿರೆಯ ಕುರಿಯ ವಿಠಲಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ’ಯಕ್ಷಸಾಂಗತ್ಯ ಸಪ್ತಕ’ವು ಅನೇಕ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟಿತು. ಪ್ರಪಂಚವು ಒಂದು ಸಂಕ್ರಮಣ ಕಾಲದಲ್ಲಿರುವಾಗ ಈ ಕಾರ್ಯಕ್ರಮ ಮೂಡಿಬಂದದ್ದು ಇದಕ್ಕೆ ಒಂದು ಕಾರಣವಾದರೆ, ಆ ನೆಪದಿಂದಲೇ ಯಕ್ಷಗಾನದ ನೈಜ ಜಾಗತೀಕರಣ ಸಾಧ್ಯವಾದದ್ದು ಇನ್ನೊಂದು ಕಾರಣ. ಕೊರೊನಾ ಬಿಕ್ಕಟ್ಟಿನಿಂದ ಯಕ್ಷಗಾನದಂತಹ ಪ್ರದರ್ಶನ ಕಲೆಗಳಿಗೆ ಒದಗಿದ ಸಂಕಷ್ಟ ಎಷ್ಟು ಅನಿರೀಕ್ಷಿತವೋ, ಅದಕ್ಕೊಂದು ಜಾಗತಿಕ ಆನ್ಲೈನ್ ವೇದಿಕೆ ಒದಗಿಬಂದದ್ದೂ ಅಷ್ಟೇ ಅನಿರೀಕ್ಷಿತ.

ಆನ್ಲೈನ್ ಸಾಧ್ಯತೆ ಬಿಚ್ಚಿಟ್ಟ ಯಕ್ಷಸಾಂಗತ್ಯ ಸಪ್ತಕ Read More »

ಮಾಜಿ ರೈಫಲ್‌ ಶೂಟಿಂಗ್‌ ಚಾಂಪಿಯನ್‌ ಪೂರ್ಣಿಮಾ ನಿಧನ

ಭಾರತದ ಮಾಜಿ ಶೂಟರ್ ಮತ್ತು ತರಬೇತುದಾರೆ ಪೂರ್ಣಿಮಾ ಜಾನಾನೆ ತಮ್ಮ 42 ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಭಾರತೀಯ ರೈಫಲ್ ಶೂಟರ್ ಆಗಿದ್ದ ಪೂರ್ಣಿಮಾ ಅವರು ಎರಡು ವರ್ಷಗಳಿಂದ ಕ್ಯಾನ್ಸರ್‌ ರೋಗದಿಂದ ಬಳಲುತ್ತಿದ್ದರು. ಗುಣವಾಗದ ಕ್ಯಾನ್ಸರ್‌ನಿಂದಾಗಿ ಇಂದು ಪೂರ್ಣಿಮಾ ಪುಣೆಯಲ್ಲಿ ಕೊನೆಯುಸಿರೆಳೆದರು. ಪೂರ್ಣಿಮಾ ವಿಶ್ವಕಪ್, ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಅವರು 10 ಮೀಟರ್ ಏರ್ ರೈಫಲ್‌ನಲ್ಲಿ ದೀರ್ಘಕಾಲದವರೆಗೆ ರಾಷ್ಟ್ರೀಯ ದಾಖಲೆ ಹೊಂದಿದ್ದರು. ಅವರ ಯಶಸ್ಸಿಗೆ ಮಹಾರಾಷ್ಟ್ರ ಸರ್ಕಾರ ಅವರಿಗೆ ಶಿವ ಛತ್ರಪತಿ ಕ್ರೀಡಾ ಪ್ರಶಸ್ತಿಯನ್ನು ನೀಡಿತು.

ಮಾಜಿ ರೈಫಲ್‌ ಶೂಟಿಂಗ್‌ ಚಾಂಪಿಯನ್‌ ಪೂರ್ಣಿಮಾ ನಿಧನ Read More »

ವಿಶ್ವ ಹಿಂದೂ ಪರಿಷತ್‌ ವೆಬ್‌ಸೈಟ್‌ಗೆ ಕನ್ನ

ದಿಲ್ಲಿ : ವಿಶ್ವ ಹಿಂದೂ ಪರಿಷತ್‌ ನ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಲಾಗಿದ್ದು, ಅದರ ಮುಖಪುಟದಲ್ಲಿ ಪ್ರಚೋದನಕಾರಿ ಸಂದೇಶಗಳನ್ನು  ಪೋಸ್ಟ್ ಮಾಡಲಾಗಿದೆ ಎಂದು ವಿಎಚ್‌ಪಿ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ. ವೆಬ್‌ಸೈಟ್ ಅನ್ನು ಬೆಳಿಗ್ಗೆ ಹ್ಯಾಕ್ ಮಾಡಲಾಗಿದ್ದು ಅದಕ್ಕಾಗಿ ವಿಎಚ್‌ಪಿಯ ಉನ್ನತ ನಾಯಕರು ತಾತ್ಕಾಲಿಕವಾಗಿ ಸೈಟ್ ಅನ್ನು ಮುಚ್ಚಲು ನಿರ್ಧರಿಸಿದ್ದಾರೆ. ಸೈಟ್‌ಗೆ ಲಾಗ್ ಇನ್ ಆದಾಗ ಅದು “ನಿರ್ವಹಣೆಯಲ್ಲಿದೆ” ಎಂದು ತೋರಿಸುತ್ತಿದೆ. ಹ್ಯಾಕರ್‌ಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೋರಿ ಗೃಹ ಸಚಿವಾಲಯ (ಎಂಎಚ್‌ಎ) ಮತ್ತು ದಿಲ್ಲಿ ಸೈಬರ್

ವಿಶ್ವ ಹಿಂದೂ ಪರಿಷತ್‌ ವೆಬ್‌ಸೈಟ್‌ಗೆ ಕನ್ನ Read More »

ಕೊರೊನಾ ಸೋಂಕಿತರಿಗೆ ಸಿಗಲಿದೆ ಪೌಷ್ಠಿಕ ಆಹಾರ

ಬೆಂಗಳೂರು : ರಾಜ್ಯದಾದ್ಯಂತ ಇರುವ ಜಿಲ್ಲಾ ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೊವಿಡ್ ಕೇರ್ ಕೇಂದ್ರ ಹಾಗೂ ಕೊವಿಡ್ ಕೇರ್ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೊರೊನಾ ಸೋಂಕಿತರಿಗೆ ಪೌಷ್ಠಿಕ ಆಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೆಳಗಿನ ಉಪಹಾರವನ್ನು 7 ಗಂಟೆಗೆ, ಮಧ್ಯಾಹ್ನದ ಊಟವನ್ನು 1 ಗಂಟೆಗೆ ಹಾಗೂ ರಾತ್ರಿ ಊಟವನ್ನು 7 ಗಂಟೆಗೆ ನಿಯಮಿತವಾಗಿ ನೀಡಬೇಕು. ಪ್ರತಿ ವ್ಯಕ್ತಿಯ ಆಹಾರ ವೆಚ್ಚ 250 ರೂ.ಗಳಿಗೆ ಮೀರದಂತೆ ಕ್ರಮ ವಹಿಸಬೇಕು. ಪ್ರತಿ ನಿತ್ಯ ಆಹಾರ ವ್ಯವಸ್ಥೆಯನ್ನು ರೋಗಿಗಳಿಗೆ, ವೈದ್ಯರಿಗೆ, ಅಧಿಕಾರಿಗಳಿಗೆ

ಕೊರೊನಾ ಸೋಂಕಿತರಿಗೆ ಸಿಗಲಿದೆ ಪೌಷ್ಠಿಕ ಆಹಾರ Read More »

ಸೂಪರ್‌ ಸ್ಟಾರ್ ರಜನೀಕಾಂತ್ ನಟಿಸಿದ ಕನ್ನಡ ಸಿನೇಮಾಗಳು

ರಜನಿಕಾಂತ್‌ ಕನ್ನಡದವರು ಎಂಬ ವಿಷಯ ನಿಮಗೆ ಗೊತ್ತಿದೆ. ಕನ್ನಡದಲ್ಲಿ ಸಾಕಷ್ಟು ಅವಕಾಶ ಸಿಗದೆ ಅವರು ತಮಿಳಿನತ್ತ ವಲಸೆ ಹೋದರು. ಅಲ್ಲಿ ಬಾರೀ ಯಶಸ್ಸು ಕಂಡರು. ತಮಿಳು ಚಿತ್ರರಂಗದಲ್ಲಿ ತಲೈವಾ ಎಂದೇ ಖ್ಯಾತಿಯಾಗಿರುವ ರಜನೀಕಾಂತ್ ಪ್ರಸ್ತುತ ಭಾರತೀಯ ಚಿತ್ರರಂಗದ ಪ್ರಮುಖ ನಟರಲ್ಲೊಬ್ಬರು. ಬೆಂಗಳೂರಿನಲ್ಲಿ ಜನಿಸಿದ ಶಿವಾಜಿರಾವ್ ಗಾಯಕವಾಡ್ ನಂತರ ತಮಿಳು ಚಿತ್ರರಂಗದ ಮೂಲಕ ಭಾರತದ ಖ್ಯಾತ ನಟನಾಗಿ ಬೆಳೆದದ್ದು ಇತಿಹಾಸ. ತಮ್ಮ ಸಿನಿಜೀವನದ ಆರಂಭದಲ್ಲಿ ಕನ್ನಡದಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಇಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಅದೇ

ಸೂಪರ್‌ ಸ್ಟಾರ್ ರಜನೀಕಾಂತ್ ನಟಿಸಿದ ಕನ್ನಡ ಸಿನೇಮಾಗಳು Read More »

ನಾಳೆ ಸಾರಿಗೆ ನಿಗಮ ನೌಕರರ ಪ್ರತಿಭಟನೆ

ಬೆಂಗಳೂರು:  ರಾಜ್ಯ ಸರ್ಕಾರದಿಂದ ಪ್ರತಿಯೊಂದು ಸಾರಿಗೆ ನಿಗಮಕ್ಕೆ ಕನಿಷ್ಟ 500 ಕೋಟಿ ರೂ. ಗಳ ಸಂಕಷ್ಟ ಪರಿಹಾರ ಪ್ಯಾಕೇಜನ್ನು ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು‌ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್ (ಸಿಐಟಿಯು) ನಾಳೆ ಪ್ರತಿಭಟನೆ ನಡೆಸಲು ಮುಂದಾಗಿದೆ. ಕಚ್ಚಾ ತೈಲ ಬೆಲೆ ವಿಪರೀತವಾಗಿ ಕುಸಿದಿದೆ. ಆದರೆ ಕಳೆದ ಹದಿನೈದು ದಿನಗಳಲ್ಲಿ ಲೀಟರ್ ಡೀಸೆಲ್ ಬೆಲೆ 11 ರೂ.ಗಳಷ್ಟು ಹೆಚ್ಚಳವಾಗಿದೆ. ಇದರಿಂದ ಸಾರಿಗೆ ನಿಗಮಗಳು ನಷ್ಟಕ್ಕೆ ಒಳಗಾಗಲಿವೆ. ಆದ್ದರಿಂದ ಅಂತಾರಾಷ್ಟ್ರೀಯ ಬೆಲೆ

ನಾಳೆ ಸಾರಿಗೆ ನಿಗಮ ನೌಕರರ ಪ್ರತಿಭಟನೆ Read More »

ಹಾಸ್ಯ ನಟ ರಾಜ ಗೋಪಾಲ್ ನಿಧನ

650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಕಲಾವಿದ ಬೆಂಗಳೂರು : ಕನ್ನಡದ ಹಾಸ್ಯ ಕಲಾವಿದ ರಾಜ ಗೋಪಾಲ್ ನಿಧನರಾಗಿದ್ದಾರೆ. ಅಸ್ತಮ ಮತ್ತು ಕಿಡ್ನಿ ಸಮಸ್ಯೆ ಯಿಂದ ಬಳಲುತ್ತಿದ್ದ  ರಾಜ ಗೋಪಾಲ್ ಅವರಿಗೆ 69 ವರ್ಷ ವಯಸ್ಸಾಗಿತ್ತು. ನಿನ್ನೆ ರಾತ್ರಿ 1ಗಂಟೆಗೆ ಮನೆಯಲ್ಲೆ ಕೊನೆಯುಸಿರೆಳೆದ ರಾಜ್ ಗೋಪಾಲ್ ಕೆಂಗೇರಿ ಬಳಿಯ ವಲಗರ ಹಳ್ಳಿಯಲ್ಲಿ ಬಿಡಿಎ ನಿರ್ಮಿಸಿರೋ ವಸತಿ ಸಮುಚ್ಚಯದಲ್ಲಿ ವಾಸವಿದ್ದರು. ರಾಜ್ ಗೋಪಾಲ್‌ಗೆ ಮೂರು ಜನ ಹೆಣ್ಣುಮಕ್ಕಳಿದ್ದಾರೆ. ಕನ್ನಡ ತಮಿಳು ಸೇರಿದಂತೆ 650 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಫೇಮಸ್ ಅರ್ಕೆಸ್ಟ್ರಾಗಳಲ್ಲಿ ಮಿಮಿಕ್ರಿ ಮಾಡಿ ಹೆಸರು ಮಾಡಿದ್ದ ರಾಜ್ ಗೋಪಾಲ್ ವಿಷ್ಣುವರ್ಧನ್,

ಹಾಸ್ಯ ನಟ ರಾಜ ಗೋಪಾಲ್ ನಿಧನ Read More »

10 ದಿನ ನವಿ ಮುಂಬಯಿ ಪೂರ್ಣ ಲಾಕ್‌ ಡೌನ್‌

ಮುಂಬಯಿ: ಕೊರೊನಾ ವೈರಸ್‌ ಅಂಕೆ ಮೀರಿ ಹರಡುತ್ತಿರುವ ಕಾರಣ  ವಿವಿಧ ನಗರಗಳು ಮತ್ತೊಮ್ಮು ಲಾಕ್‌ ಡೌನ್‌ ಮೊರೆ ಹೋಗುತ್ತಿವೆ. ಈ ನಿಟ್ಟಿನಲ್ಲಿ ನವಿ ಮುಂಬಯಿ ಮಹಾನಗರಪಾಲಿಕೆ ಜು.3 ರಿಂದ 13 ರ ತನಕ ಸಂಪೂರ್ಣ ಲಾಕ್‌ ಡೌನ್‌ ಜಾರಿಗೊಳಿಸಲಿದೆ. ಅಗತ್ಯ ವಸ್ತುಗಳ ಸಾಗಾಟ ಹೊರತುಪಡಿಸಿ ಉಳಿದೆಲ್ಲ ಸಂಚಾರವನ್ನು ನಿರ್ಭಂಧಿಸಲಾಗಿದೆ.ಅಗತ್ಯ ಸೇವೆ ಹೊರತುಪಡಿಸಿ ಉಳಿದ ಅಂಗಡಿಗಳನ್ನು ಮುಚ್ಚಲು ನಗರಪಾಲಿಕೆ ಆದೇಶಿಸಿದೆ. ಹಾಲು ತರಕಾರಿ, ಪಡಿತರ ಸಾಮಾಗ್ರಿಗಳು ಬೆಳಗ್ಗೆ 9 ರಿಂದ ಸಂಜೆ 5 ರ ತನಕ ಸಿಗಲಿವೆ. ಸದ್ಯ

10 ದಿನ ನವಿ ಮುಂಬಯಿ ಪೂರ್ಣ ಲಾಕ್‌ ಡೌನ್‌ Read More »

error: Content is protected !!
Scroll to Top