ಉಡುಪಿ : ಉಡುಪಿ ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾಗಿ ಗುರುರಾಜ ಮಾಡ ಬೈಲೂರು, ಕಾರ್ಯದರ್ಶಿಯಾಗಿ ರಾಕೇಶ್ ಅಮೀನ್ ಸಾಣೂರು ಹಾಗೂ ಕಾರ್ಯಕಾರಿಣಿ ಸದಸ್ಯರಾಗಿ ಪ್ರಿತುಲ್ ಕೆ.ಹೆಚ್. ಕಾರ್ಕಳ ಆಯ್ಕೆಯಾಗಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಆದೇಶಿಸಿದ್ದಾರೆ.
ಗುರುರಾಜ ಮಾಡ ಈ ಮೊದಲು ಜಿಲ್ಲಾ ಯುವಮೋರ್ಚಾ ಕೋಶಾಧಿಕಾರಿಯಾಗಿ, ಕಾರ್ಕಳ ತಾಲೂಕು ಯುವಮೋರ್ಚಾ ಉಪಾಧ್ಯಕ್ಷರಾಗಿ ಹಾಗೂ ರಾಕೇಶ್ ಅಮೀನ್ ತಾಲೂಕು ಯುವಮೋರ್ಚಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

























