ಕಾರ್ಕಳ : ಕೆ.ಎಂ.ಇ.ಎಸ್ ಶಿಕ್ಷಣ ಸಂಸ್ಥೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರಾರಂಭೋತ್ಸವ ಜೂ. 1ರಂದು ನಡೆಯಿತು. ಪ್ರಾಂಶುಪಾಲ ಕೆ. ಬಾಲಕೃಷ್ಣರಾವ್, ಪ್ರೌಢಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಲೋಲಿಟಾ ಡಿʼಸಿಲ್ವಾ ವಿದ್ಯಾರ್ಥಿಗಳನ್ನು ಹೂವಿನ ಗಿಡವಿರುವ ಕುಂಡಗಳನ್ನು ನೀಡಿ ಸ್ವಾಗತಿಸಿದರು. ಅಧ್ಯಾಪಕರು ವಿದ್ಯಾರ್ಥಿಗಳ ಮೇಲೆ ಹೂ ಚೆಲ್ಲಿ ಬರಮಾಡಿಕೊಂಡರು. ಶಾಲೆಯ ಆವರಣವನ್ನು ಹಾಗೂ ಪ್ರತಿಯೊಂದು ತರಗತಿಗಳನ್ನು ಸುಂದರವಾಗಿ ಅಲಂಕರಿಸಲಾಗಿತ್ತು.
ಕೆ.ಎಂ.ಇ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಾರಂಭೋತ್ಸವ






































































