ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ : 77 ಸಾಧಕರಿಗೆ ಪ್ರಶಸ್ತಿ

ಕಾರ್ಕಳ : 2025ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಅ. 31ರಂದು ಅಧಿಕೃತವಾಗಿ ಪ್ರಕಟಗೊಂಡಿದ್ದು ಜಿಲ್ಲೆಯಲ್ಲಿ ಒಟ್ಟು 77 ಮಂದಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಒಲಿದಿದೆ. ಕಾರ್ಕಳ ಹೆಬ್ರಿ ಉಭಯ ತಾಲೂಕಿನ 16 ಮಂದಿಗೆ ಪ್ರಶಸ್ತಿ ಘೋಷಣೆಯಾಗಿದೆ.

ಕಾರ್ಕಳ
ಸಾಹಿತ್ಯ ಮತ್ತು ಸಮಾಜ ಸೇವೆಯ ಸಾಧನೆಗಾಗಿ ಕುಕ್ಕುಂದೂರು ಗ್ರಾಮದ ಬಿಪಿನಚಂದ್ರಪಾಲ್‌ ನಕ್ರೆ, ದೇವರಾಧನೆಗಾಗಿ ಬೆಳ್ಮಣ್ ಗ್ರಾಮದ ಶ್ರೀಧರ ಭಟ್‌, ಸಂಗೀತ ಕ್ಷೇತ್ರದ ಸಾಧನೆಗಾಗಿ (ವಾದ್ಯ, ಸ್ಯಾಕ್ಸೋಪೋನ್‌ ಕಲಾವಿದ) ಕಾರ್ಕಳ ಅನಂತಶಯನ ದೇವಸ್ಥಾನ ರಸ್ತೆಯ ಪಾಂಡು ದೇವಾಡಿಗ, ವಿವಿಧ ಕಲಾಕ್ಷೇತ್ರದ ಪ್ರೋತ್ಸಾಹಕ್ಕಾಗಿ ಬೆಳ್ಮಣ್‌ ಗ್ರಾಮ ಶಿವಗಿರಿ ನಗರದ ಮರಲೀಧರ ಜೋಗಿ, ಕೃಷಿ ಹಾಗೂ ಸಮಾಜಸೇವೆಗಾಗಿ ಯರ್ಲಪಾಡಿ ಗ್ರಾಮದ ದಾಮೋದರ ಆಚಾರ್ಯ, ದೈವರಾಧನೆಗಾಗಿ ಬೈಲೂರು ಕೌಡೂರು ಗ್ರಾಮದ ಬೂಬ ಪರವ, ದೇವರ ನರ್ತನೆಗಾಗಿ ಪಳ್ಳಿ ಗ್ರಾಮದ ಗುರುಪ್ರಸಾದ್‌ ಭಟ್‌, ಸಂಗೀತ ಕ್ಷೇತ್ರದ ಸಾಧನೆಗಾಗಿ ಬೋಳ ಬೈಲಾಬೆಟ್ಟುವಿನ ಅಮಿತಾ (ನಮಿತಾ), ಸಮಾಜ ಸೇವೆಗಾಗಿ ಕಾರ್ಕಳ ಕಡೆಕುಂಜದ ನವೀನ್‌ ಎಂ. ಪೂಜಾರಿ, ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿ (ರಿ.) ಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.

ಹೆಬ್ರಿ
ಕ್ರೀಡಾ ಕ್ಷೇತ್ರದ ಸಾಧನೆಗಾಗಿ ನಾಡ್ಪಾಲು ಗ್ರಾಮದ ವೈ. ಕುಮಾರ ಸ್ವಾಮಿ, ವೈದ್ಯಕೀಯ ಸೇವೆಗಾಗಿ ಶಿವಪುರದ ಡಾ. ಗೋಪಾಲ ಪೂಜಾರಿ, ಸಮಾಜ ಸೇವೆಗಾಗಿ ವರಂಗ ಗ್ರಾಮದ ವೀಣಾ ಆರ್.‌ ಭಟ್‌ ಮತ್ತು ಶಂಕರ್‌ ಶೆಟ್ಟಿ, ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಚಾರ ಗ್ರಾಮದ ಪ್ರದೀಪ್‌ ಹೆಬ್ಬಾರ್‌, ಸಂಘ ಸಂಸ್ಥೆಗಾಗಿ ಶ್ರೀ ಅನಂತ ಪದ್ಮನಾಭ ಫ್ರೇಂಡ್ಸ್‌ (ರಿ.) ಹೆಬ್ರಿ, ಸಮಾಜ ಸೇವೆ ಮತ್ತು ಧಾರ್ಮಿಕ ಸೇವೆಗಾಗಿ ಶ್ರೀ ದುರ್ಗಾ ಪರಮೇಶ್ವರಿ ಭಜನಾ (ರಿ.) ಕೊಂಜಾಡಿಗೆ ಪ್ರಶಸ್ತಿ ಘೋಷಣೆಯಾಗಿದೆ.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ 👇





























































































































error: Content is protected !!
Scroll to Top