ಸ್ಪೂರ್ತಿ ಪದಕ ಹಸ್ತಾಂತರ – 45 ಸಾ. ರೂ. ಸಹಾಯಧನ ವಿತರಣೆ
ಕಾರ್ಕಳ : ಲಯನ್ಸ್ ಕ್ಲಬ್ ಕಾರ್ಕಳ ಸಿಟಿಗೆ ಉಡುಪಿ 317ಸಿ ಜಿಲ್ಲಾ ಗವರ್ನರ್ ಪಿ.ಎಂ.ಜೆ.ಎಫ್. ಸಪ್ನಾ ಸುರೇಶ್ ಅ. 28ರಂದು ಭೇಟಿ ನೀಡಿದರು.
ಅವರನ್ನು ಕ್ಲಬ್ನ ಪದಾಧಿಕಾರಿಗಳು ಕಾರ್ಕಳ ಬಂಗ್ಲೆಗುಡ್ಡೆಯಲ್ಲಿರುವ ಶ್ರೀ ಲಕ್ಷ್ಮೀ ಸಿಲ್ಕ್ಸ್ ಬಟ್ಟೆ ಮಳಿಗೆ ಆವರಣದಲ್ಲಿ ಸ್ವಾಗತಿಸಿದರು. ನಂತರ ಸುರಕ್ಷಾ ಸೇವಾಶ್ರಮಕ್ಕೆ ಭೇಟಿ ನೀಡಲಾಯಿತು. ಅಲ್ಲಿರುವ ಆಶ್ರಮ ವಾಸಿಗಳಿಗೆ ಸಿಹಿ ತಿಂಡಿ ಮತ್ತು 15,000 ರೂ. ದೇಣಿಗೆಯನ್ನು ಕ್ಲಬ್ ವತಿಯಿಂದ ಹಸ್ತಾಂತರಿಸಲಾಯಿತು. ಈ ವೇಳೆ ಸಪ್ನಾ ಸುರೇಶ್ ಅವರ ವತಿಯಿಂದ ಆಶ್ರಮಕ್ಕೆ 10,000 ರೂ. ಸಹಾಯ ಧನ ನೀಡುವುದಾಗಿ ಘೋಷಿಸಿದರು.
ಸ್ಫೂರ್ತಿ ಪದಕ ಹಸ್ತಾಂತರ
ಸಂಜೆ ಹೊಟೇಲ್ ಕಟೀಲ್ ಇಂಟರ್ ನ್ಯಾಶನಲ್ ಸಭಾಂಗಣದಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಲಯನ್ಸ್ ತತ್ವಾದರ್ಶಗಳ ಬಗ್ಗೆ ತಿಳಿಸಿದರು. ಕ್ಲಬ್ಗೆ ನೂತನ ಸದಸ್ಯರಾಗಿ ಸೇರ್ಪಡೆಗೊಂಡ ವೀಣಾ ಶೆಟ್ಟಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. 2025ರ ಸಾಲಿನ ಅಧ್ಯಕ್ಷ ಗೋಪಾಲ್ ಅಂಚನ್, ಕಾರ್ಯದರ್ಶಿ ನಿಹಾಲ್ ಶೆಟ್ಟಿ ಜಕ್ಕನ್ಮಕ್ಕಿ ಮತ್ತು ಖಜಾಂಚಿ ಶಾಲಿನಿ ರವಿ ಸುವರ್ಣ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಅಂತರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಮುಖಾಂತರ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿರುವ ಲಯನ್ಸ್ ಕ್ಲಬ್ ಕಾರ್ಕಳ ಸಿಟಿಗೆ ಸ್ಪೂರ್ತಿ ಪದಕ ಹಸ್ತಾಂತರಿಸಿದರು.


ಸನ್ಮಾನ – ಸಹಾಯ ಧನ
ಅಜೆಕಾರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಹೇಶ್ ಟಿ. ಎಂ., ಅಂತರಾಷ್ಟ್ರೀಯ ಕ್ರೀಡಾಪಟು ಮತ್ತು ಚಲನಚಿತ್ರನಟ ರೋಹಿತ್ ಕುಮಾರ್ ಕಟೀಲ್ ಹಾಗೂ ಕಾರ್ಕಳದ ಕರಿಯಕಲ್ಲಿನಲ್ಲಿರುವ ಹಿಂದು ರುದ್ರಭೂಮಿಯ ಸಂಚಾಲಕ ಪ್ರಕಾಶ್ ರಾವ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭ ಇತ್ತೀಚೆಗೆ ಹೃದಯಾಘಾತದಿಂದ ಮೃತರಾದ ದಿ. ನಾರಾಯಣ ಪೂಜಾರಿ ಅವರ ಕುಟುಂಬಕ್ಕೆ ಹತ್ತು ಸಾವಿರ ಮತ್ತು ಓರ್ವ ವಿದ್ಯಾರ್ಥಿಯ ವಿದ್ಯಾರ್ಜನೆಗಾಗಿ ಹತ್ತು ಸಾವಿರ ಧನಸಹಾಯ ಹಸ್ತಾಂತರಿಸಲಾಯಿತು.
ಪ್ರಾಂತಿಯ ಅಧ್ಯಕ್ಷ ಗುರುಪ್ರಸಾದ್ ಶೆಟ್ಟಿ, ವಲಯಾಧ್ಯಕ್ಷದಿನೇಶ್ ಕುಮಾರ್, ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ಅಧ್ಯಕ್ಷ ಗೋಪಾಲ್ ಅಂಚನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾವ್ಯ ರಾವ್ ಪ್ರಾರ್ಥಿಸಿ, ಟಿ. ಯೋಗೇಶ್ ನಾಯಕ್ ಧ್ವಜವಂದನೆ ನೆರವೇರಿಸಿದರು. ಕೆ. ಪಿ. ಪದ್ಮಾವತಿ ಲಯನ್ಸ್ ಧ್ಯೇಯವಾಕ್ಯ ವಾಚಿಸಿ, ಸ್ಥಾಪಕಾಧ್ಯಕ್ಷೆ ಜ್ಯೋತಿ ರಮೇಶ್ ಸ್ವಾಗತಿಸಿದರು. ಕಾರ್ಯದರ್ಶಿ ನಿಹಾಲ್ ಶೆಟ್ಟಿ ವರದಿ ವಾಚಿಸಿದರು. ಪ್ರಶಾಂತ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಶಾಲಿನಿ ಸುವರ್ಣ, ಪೂರ್ಣಿಮಾ ಶೆಣೈ, ನಯನ ನಾಯಕ್, ಟಿ. ಕೆ. ರಘುವೀರ್, ರಘುನಾಥ್ ಕೆ.ಎಸ್. ಸಹಕರಿಸಿದರು.
ಜಿಲ್ಲಾ ಲಿಯೋ ಕೋ-ಆರ್ಡಿನೇಟರ್ ರಾಧಾಕೃಷ್ಣ ಮೆಂಡನ್, ಜಿಲ್ಲಾ ಕಮ್ಯುನಿಕೇಷನ್ ಮತ್ತು ಮಾರ್ಕೆಟಿಂಗ್ ಕೋ-ಆರ್ಡಿನೇಟರ್ ರಮಾನಂದ ಕೆ., ದಾನಿ ಪದ್ಮನಾಭ ಭಂಡಾರಿ, ಪ್ರಾಂತ್ಯ ಮೂರರ ಪ್ರಾಂತ್ಯಾಧ್ಯಕ್ಷ ಗಿರೀಶ್ ರಾವ್, ಲಯನ್ಸ್ ಕ್ಲಬ್ ಕಾರ್ಕಳ ಸಿಟಿಯ ಸದಸ್ಯರಾದ ಧರ್ಮರಾಜ್, ಧೀರಜ್ ಕೆ., ರೀತಾ ಶೆಟ್ಟಿ, ದಿನೇಶ್ ಸಾಲಿಯಾನ್, ರವಿ ಸುವರ್ಣ ಹಾಗೂ ಆಮಂತ್ರಿತ ವಿವಿಧ ಲಯನ್ಸ್ ಕ್ಲಬ್ಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಭೆಯ ಬಳಿಕ ಶ್ರೀ ಸಾಯಿ ಡಾನ್ಸ್ ಕ್ಲಾಸ್ ಮತ್ತು ಸ್ಥಳೀಯ ಮಕ್ಕಳಿಂದ ನೃತ್ಯ ಪ್ರದರ್ಶನ ಹಾಗೂ ರಕ್ಷಣ್ ಮತ್ತು ತಂಡದಿಂದ ಗೀತ ಗಾಯನ ನಡೆಯಿತು.






























































