ಉಡುಪಿ : ದೀಪಾವಳಿ ಪೂಜೆ ವೇಳೆ ಅಗ್ನಿ ಅವಘಡ – ಸುಟ್ಟು ಕರಕಲಾದ ಮೀನುಗಾರಿಕಾ ಹಡುಗುಗಳು

ಉಡುಪಿ : ಕುಂದಾಪುರದ ಗಂಗೊಳ್ಳಿಯಲ್ಲಿ ಲಂಗರು ಹಾಕಿದ್ದ ಬೋಟ್​​ನಲ್ಲಿ ಬೆಂಕಿ ಅಗ್ನಿ ಅವಘಡ ಸಂಭವಿಸಿದೆ. ಪರಿಣಾಮ ಅಕ್ಕ ಪಕ್ಕದ ಮೀನುಗಾರಿಕಾ ಬೋಟುಗಳಿಗೆ ಬೆಂಕಿ ವ್ಯಾಪಿಸಿದ್ದು, ಏಳು ಹಡಗುಗಳು ಬೆಂಕಿಗಾಹುತಿಯಾಗಿವೆ. ದೀಪಾವಳಿ ಪ್ರಯುಕ್ತ ಇಂದು ಗಂಗೊಳ್ಳಿ ಬಂದರಿನಲ್ಲಿ ಪೂಜೆ ನಡೆಯುತ್ತಿದ್ದ ವೇಳೆ ಏಕಾಏಕಿ ಅಗ್ನಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಇನ್ನು ವಿಷಯ ತಿಳಿದ ಕೂಡಲೇ ಸ್ಥಳೀಯ ಅಗ್ನಿಶಾಮಕ ದಳ ರಕ್ಷಣಾ ಕಾರ್ಯಚರಣೆ ನಡೆಸಿದ್ದಾರೆ. ದುರಂತದಲ್ಲಿ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಪಟಾಕಿ ಸಿಡಿದು ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.















































































































































error: Content is protected !!
Scroll to Top