ಹೆಬ್ರಿ : ದೀಪಾವಳಿಯ ಹಬ್ಬದ ಪ್ರಯುಕ್ತ ಗದ್ದೆ ಸೇರಿದಂತೆ ಕೃಷಿ ಭೂಮಿಗೆ ದೀಪವಿಡಲು ಹೋದ ಯುವಕ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನ. 12 ರ ರಾತ್ರಿ ಹೆಬ್ರಿ ಚಾರ ಬಸದಿ ಬಳಿ ಸಂಭವಿಸಿದೆ. ಸಚಿನ್ (35) ಮೃತ ದುರ್ದೈವಿ.
ಸಚಿನ್ ದೀಪ ಇಡಲು ಹೋದ ಸಂದರ್ಭ ಮನೆಯ ಬಳಿಯಿರುವ ತಮ್ಮ ಸಂಬಂಧಿಕರ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








































































