ಕಾರ್ಕಳ : ಕಪಾಟಿನಲ್ಲಿದ್ದ ನಗ, ನಗದು ಸೇರಿ ಸುಮಾರು 5 ಲ.ರೂ. ಮೌಲ್ಯದ ವಸ್ತುಗಳು ಕಳವಾಗಿರುವ ಘಟನೆ ನಂದಳಿಕೆಯಲ್ಲಿ ಮೇ 30 ರಂದು ಬೆಳಕಿಗೆ ಬಂದಿದೆ. ನಂದಳಿಕೆ ಶಿವಶಕ್ತಿ ಮೂಡುಮನೆಯ ಎನ್.ಸುಧಾಕರ ರಾವ್(66) ಎಂಬವರ ಮೂಲಮನೆಯಿಂದ ಈ ಸೊತ್ತುಗಳು ಕಳವಾಗಿವೆ. ಮೂಡುಮನೆಯ ಪಕ್ಕದಲ್ಲೇ ಮೂಲಮನೆಯೂ ಇದೆ.
ಸುಧಾಕರ ರಾವ್ ಹೆಂಡತಿಯ ಸುಮಾರು 40 ಗ್ರಾಂ ತೂಕದ ಕರಿಮಣಿ ಸರ-2. 26 ಗ್ರಾಂ.ನ ನೆಕ್ಲೇಸ್ -1, 40 ಗ್ರಾಂ.ನ ಮುತ್ತಿನ ಸರ -1. 30 ಗ್ರಾಂ.ನ ಕಿವಿ ಓಲೆ-3, 15 ಗ್ರಾಂ.ನ ಉಂಗುರ -2, 24 ಗ್ರಾಂ.ನ ಲಕ್ಷ್ಮಿ ಪದಕ ಇರುವ ಚೈನು-1, 10 ಗ್ರಾಂ.ನ ಮಕ್ಕಳ ಚೈನು-1, 10 ಗ್ರಾಂ.ನ ಬಳೆ-1, ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ಸುಮಾರು 3 ಸಾವಿರ ರೂ. ನಗದು ಸೇರಿ ಅಂದಾಜು 24 ಪವನ್ ತೂಕದ ಸುಮಾರು 5 ಲಕ್ಷ ಮೌಲ್ಯದ ಒಡವೆಗಳನ್ನು ಕಳ್ಳರು ಮೇ 26ರಿಂದ 30ರ ಮಧ್ಯೆ ಕದ್ದೊಯ್ದಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಂದಳಿಕೆ : ಮನೆಯಿಂದ 5 ಲ.ರೂ. ನಗ-ನಗದು ಕಳವು









































