ಕಡಬ : ವಿದ್ಯುತ್ ಕಂಬವೇರಿ ದುರಸ್ತಿ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿದ ಪರಿಣಾಮ ಲೈನ್ ಮ್ಯಾನ್ ಮೃತಪಟ್ಟ ಘಟನೆ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ತಲೆಕ್ಕಿ ಎಂಬಲ್ಲಿ ಜೂ. 1 ರಂದು ಸಂಭವಿಸಿದೆ. ಮೃತಪಟ್ಟ ಲೈನ್ ಮ್ಯಾನ್‌ನನ್ನು ಬಾಗಲಕೋಟೆ ಜಿಲ್ಲೆಯ ದ್ಯಾಮಣ್ಣ ದೊಡ್ಮನಿ ಎಂದು ಗುರುತಿಸಲಾಗಿದೆ.
ತಲೆಕ್ಕಿ ಬಳಿ ವಿದ್ಯುತ್ ಕಂಬ ಹತ್ತಿ ದುರಸ್ತಿ ಮಾಡುತ್ತಿದ್ದ ವೇಳೆ ಹಠಾತ್ ವಿದ್ಯುತ್ ಪ್ರವಹಿಸಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸ್ಥಳೀಯರು ಮರದ ಕೋಲಿನ ಸಹಾಯದಿಂದ ಮೇಲಿನಿಂದ ಅವರನ್ನು ಕೆಳಗಿಳಿಸಿದ್ದು ಬಳಿಕ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಆಗಮಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

































