ಹಾಸ್ಟೆಲ್‌ನಲ್ಲಿ ಬಾಲಕನಿಗೆ ಲೈಂಗಿಕ ಕಿರುಕುಳ – ಆರೋಪಿಯ ಬಂಧನ

ಅಜೆಕಾರು : ಹಾಸ್ಟೆಲ್‌ನಲ್ಲಿ ಬಾಲಕನಿಗೆ ಲೈಂಗಿಕ ಕಿರಕುಳ ನೀಡಿದ ಪರಿಣಾಮ ಆರೋಪಿಯನ್ನು ಬಂಧಿಸಿದ ಘಟನೆ ಅಜೆಕಾರು ಮರ್ಣೆ ಗ್ರಾಮದಲ್ಲಿ ಸಂಭವಿಸಿದೆ. ಅಜೆಕಾರು ಪರಿಶಿಷ್ಟ ಪಂಗಡಗಳ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿನಿಲಯದಲ್ಲಿ ಮೇ 31 ರಂದು ಘಟನೆ ಸಂಭವಿಸಿದ್ದು, ಇಲ್ಲಿಯ ಅಡುಗೆ ಕೆಲಸದಾತ ಬಾಲಕನಿಗೆ (14) ಪುಸ್ತಕ ಕೊಡುವುದಾಗಿ ಹಾಸ್ಟೆಲ್‌ಗೆ ಕರೆಯಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಬಾಲಕನ ತಂದೆ ತಾಯಿ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿರುತ್ತದೆ.



















































































error: Content is protected !!
Scroll to Top