ನೀರೆ – 10 ದಿನ ಉಚಿತ ಟೈಲರಿಂಗ್‌ ತರಬೇತಿ

ಕಾರ್ಕಳ : ಟಿಎಂಜಿ ಸುನಿಧಿ ಫೌಂಡೇಶನ್ ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ವತಿಯಿಂದ ನೀರೆ ಮತ್ತು ಎರ್ಲಪಾಡಿ ವ್ಯಾಪ್ತಿಯ ಸ್ತ್ರೀಶಕ್ತಿ ಸಂಘದ 30 ಮಂದಿ ಮಹಿಳೆಯರಿಗೆ 10 ದಿನಗಳ ಉಚಿತ ಟೈಲರಿಂಗ್ ತರಬೇತಿಯನ್ನು ನೀರೆ ಶ್ರೀ ಬನಶಂಕರಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಯಿತು.
ತಾಲೂಕು ಪಂಚಾಯತ್‌ ಮಾಜಿ ಅಧ್ಯಕ್ಷ ವಿಕ್ರಂ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಹಿಳೆಯರು ಸ್ವಾವಲಂಬಿಯಾಗಿ ಬೆಳೆಯಲು ಸ್ವ ಉದ್ಯೋಗಕ್ಕೆ ಮುಂದಾಗಬೇಕು. ಟಿಎಂಜಿ ಸುನಿಧಿ ಫೌಂಡೇಶನ್ ಮತ್ತು ಭಾರತೀಯ ವಿಕಾಸ ಟ್ರಸ್ಟ್ ಈ ನಿಟ್ಟಿನಲ್ಲಿ ಮಹಿಳೆಯರಿಗೆ ನೆರವಾಗುತ್ತಿರುವುದು ಉತ್ತಮ ವಿಚಾರವೆಂದರು.
ತಾಲೂಕು ಪಂಚಾಯತ್‌ ಮಾಜಿ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗರಾಜು ಎಂ. ಕೆ., ಗ್ರಾಮ ಪಂಚಾಯತ್ ನಿಕಟ ಪೂರ್ವಧ್ಯಕ್ಷ ಸಚ್ಚಿದಾನಂದ ಎಸ್. ಪ್ರಭು, ಒಕ್ಕೂಟದ ಅಧ್ಯಕ್ಷೆ ಸುಪ್ರೀತಾ, ಭಾರತೀಯ ಸೇವಾ ಟ್ರಸ್ಟ್‌ ಕಾರ್ಯಕ್ರಮ ಅಧಿಕಾರಿ ಪ್ರತೀಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟೈಲರಿಂಗ್ ತರಬೇತಿ ಫಲಾನುಭವಿಗಳಿಗೆ ಇದೇ ವೇಳೆ ಉಚಿತ ಟ್ರೈಲರಿಂಗ್ ಕಿಟ್ ನೀಡಲಾಯಿತು.
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಉಮಾ ಸ್ವಾಗತಿಸಿ, ವಲಯ ಮೇಲ್ವಿಚಾರಕಿ ಬಬಿತಾ, ಶುಭ ಕಾರ್ಯಕ್ರಮ ನಿರ್ವಹಿಸಿದರು.









































































































error: Content is protected !!
Scroll to Top