ಗೂಂಡಾ ಕಾಯ್ದೆಯಡಿ ರೌಡಿಶೀಟರ್ ಗಣೇಶ್‌ ಪೂಜಾರಿ ಬಂಧನ

ಕಾರ್ಕಳ : ಗೂಂಡಾ ಕಾಯ್ದೆಯಡಿ ರೌಡಿಶೀಟರ್‌ ಗಣೇಶ್‌ ಪೂಜಾರಿ (48) ಬಂಧಿಸಿ ಕಲ್ಬುರ್ಗಿ ಜೈಲಿಗಟ್ಟಲಾಗಿದೆ. ಕಾರ್ಕಳ ತಾಲೂಕು ಕೌಡೂರು ಗ್ರಾಮ ನಿವಾಸಿ ಗಣೇಶ್ ಪೂಜಾರಿ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿಯ ಮೇರೆಗೆ ಜಿಲ್ಲಾ ದಂಡಾಧಿಕಾರಿ ಬಂಧನ ಆದೇಶ ಹೊರಡಿಸಿದ್ದಾರೆ. ಗಣೇಶ್ ಪೂಜಾರಿ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಒಟ್ಟು 11 ಪ್ರಕರಣಗಳು ದಾಖಲಾಗಿದ್ದು, 4 ಕೊಲೆಯತ್ನ, 1 ದರೋಡೆ, 3 ಹಲ್ಲೆ, 1 ಅಕ್ರಮ ಕೂಟ, 1 ಜೂಜಾಟ ಸೇರಿದಂತೆ ಒಟ್ಟು 11 ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಗಳ ಪೈಕಿ 1 ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದ್ದು, 7 ಪ್ರಕರಣಗಳಲ್ಲಿ ಖುಲಾಸೆ ದೊರೆತಿದೆ. 1 ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಉಳಿದ 2 ಪ್ರಕರಣಗಳು ತನಿಖೆಯ ಹಂತದಲ್ಲಿವೆ. ಗೂಂಡಾ ಕಾಯ್ದೆಯಡಿ ಬಂಧನ ಹಿನ್ನೆಲೆಯಲ್ಲಿ ಒಂದು ವರ್ಷ ಆರೋಪಿ ಬೇಲ್‌ಗೆ ಪ್ರಯತ್ನಿಸುವಂತಿಲ್ಲ.









































































































error: Content is protected !!
Scroll to Top