ಕಾರು ಡಿಕ್ಕಿ – ವಿದ್ಯಾರ್ಥಿ ಮೃತ್ಯು

ಉಡುಪಿ : ಕಾರು ಡಿಕ್ಕಿ ಹೊಡೆದು ಶಾಲಾ
ವಿದ್ಯಾರ್ಥಿಯೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಬ್ರಹ್ಮಾವರದ ಮಹೇಶ್ ಆಸ್ಪತ್ರೆ ಮುಂಭಾಗ ಡಿವೈಡರ್ ಬಳಿ ರಾ.ಹೆ.ಯಲ್ಲಿ ಎ.1ರಂದು ಸಂಭವಿಸಿದೆ.
ಸ್ಥಳೀಯ ಶಾಲೆಯ 6ನೇ ತರಗತಿಯ ವಂಶ್ ಎಸ್. ಶೆಟ್ಟಿ ಮೃತ ದುರ್ದೈವಿ.

ವಂಶ್ ಬೆಳಗ್ಗೆ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹೆದ್ದಾರಿ ದಾಟುತ್ತಿದ್ದ ವೇಳೆ ಕುಂದಾಪುರದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಶ್ ಪೋಷಕರು ವಕ್ವಾಡಿ ಮೂಲದವರಾಗಿದ್ದು, ಬ್ರಹ್ಮಾವರದಲ್ಲಿ ನೆಲೆಸಿದ್ದರು ಎಂದು ವರದಿಯಾಗಿದೆ.





























































































































error: Content is protected !!
Scroll to Top