ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಉಸ್ತುವಾರಿಗಳ ಆಯ್ಕೆ

ಕಾರ್ಕಳ ಬ್ಲಾಕ್ ಉಸ್ತುವಾರಿಯಾಗಿ ಯೋಗೀಶ್ ಆಚಾರ್ಯ ಇನ್ನಾ – ಹೆಬ್ರಿ ಬ್ಲಾಕ್ ಉಸ್ತುವಾರಿಯಾಗಿ ಮಂಜುನಾಥ್ ಜೋಗಿ

ಕಾರ್ಕಳ : ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಕಳ ಬ್ಲಾಕ್ ಉಸ್ತುವಾರಿಯಾಗಿ ಯೋಗೀಶ್ ಆಚಾರ್ಯ ಇನ್ನಾ ಹಾಗೂ ಹೆಬ್ರಿ ಬ್ಲಾಕ್ ಉಸ್ತುವಾರಿಯಾಗಿ ಮಂಜುನಾಥ್ ಜೋಗಿ‌ ಆಯ್ಕೆಯಾಗಿದ್ದಾರೆ.

ಬೈಂದೂರು ಉಸ್ತುವಾರಿಯಾಗಿ ಪ್ರಮೋದ್ ಪೂಜಾರಿ, ವಂಡ್ಸೆ-ಸಂಜಯ್ ಆಚಾರ್ಯ, ಉಡುಪಿ-ಪ್ರವೀಣ್ ಬಾರ್ಕೂರು, ಬ್ರಹ್ಮಾವರ-ಸ್ಟೀಫನ್ ಪ್ರಖ್ಯಾತ್, ಕಾಪು-ಮಮತಾ ನಾಯಕ್, ಹಿರಿಯಡ್ಕ-ಲತೀಫ್, ಕುಂದಾಪುರ-ರಕ್ಷಿತ್ ಶೆಟ್ಟಿ ಮತ್ತು ಕೋಟಾ-ಮಹಮ್ಮದ್ ಅಫ್ರೀದ್ ಅವರು ಆಯ್ಕೆಯಾಗಿದ್ದಾರೆ.

ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿಗಳ ಆದೇಶದಂತೆ ಪಕ್ಷ ಬಲವರ್ಧನೆಗಾಗಿ ಜಿಲ್ಲೆಯ 5 ವಿಧಾನಸಭೆ ಹಾಗೂ 10 ಬ್ಲಾಕ್ ಹಾಗೂ ಬೂತ್ ಮಟ್ಟದ ಯುವ ಕಾಂಗ್ರೆಸ್ ಕಮಿಟಿಗಳಲ್ಲಿ ಅರ್ಹ ಮತ್ತು ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿರುವ ನೂತನ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಎ. ಶೆಟ್ಟಿ ತಿಳಿಸಿದ್ದಾರೆ.









































































































error: Content is protected !!
Scroll to Top