ಮಾಳ‌ ಗುರುಕುಲ‌ ಶಾಲೆಯಲ್ಲಿ ಅಮೃತ ಶಿಬಿರ ಉದ್ಘಾಟನೆ

ಕಾರ್ಕಳ : ಮಾಳ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮೃತ ಶಿಬಿರ – 2025 ಇದರ ಉದ್ಘಾಟನಾ ಕಾರ್ಯಕ್ರಮ ಎ.‌1 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ನಾಗಭೂಷಣ ಜೋಶಿ ದೀಪ ಪ್ರಜ್ವಲಿಸಿ ಶಿಬಿರಕ್ಕೆ ಚಾಲನೆ ನೀಡಿದರು.

ಶ್ರೀ ಗುರುಕುಲ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗಜಾನನ ಮರಾಠೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಅಬಾಕಸ್ ನೆಕ್ಸ್ಟ್ ಜನರೇಶನ್ ಇದರ ಸಂಸ್ಥಾಪಕ ಗುರುರಾಜ ಹೆಗ್ಡೆ, ಯೋಗ ಸಂಪನ್ಮೂಲ ವ್ಯಕ್ತಿ ಪದ್ಮ ಗಂಗಾಧರ, ಭಗವದ್ಗೀತೆ ಸಂಪನ್ಮೂಲ ವ್ಯಕ್ತಿ ಶಿಲ್ಪ ಡೋಂಗ್ರೆ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನಾಗಭೂಷಣ ಮರಾಠೆ ಮತ್ತು ವೇದಗಣಿತ ಸಂಪನ್ಮೂಲ ವ್ಯಕ್ತಿ ಲತಾ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಪೂರ್ಣಿಮಾ ಸ್ವಾಗತಿಸಿದರು. ಶಿಕ್ಷಕಿ ಶೋಭಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಶಿಬಿರದಲ್ಲಿ ಸುಮಾರು 60 ವಿದ್ಯಾರ್ಥಿಗಳು ಭಾಗವಹಿಸಿದ್ದರು









































































































error: Content is protected !!
Scroll to Top