ಮಾ. 30 : ಕುಕ್ಕುಂದೂರು ಬಾವಗುತ್ತು ಸಪರಿವಾರ ನಾಗ ಬ್ರಹ್ಮಾದಿ ದೇವರ ಆಶ್ಲೇಷಾ ಬಲಿ – ಶ್ರೀ ರಕ್ತೇಶ್ವರಿ ದೈವದ ನೇಮೋತ್ಸವ

ಕಾರ್ಕಳ : ಕುಕ್ಕುಂದೂರು ಗ್ರಾಮದ ತಾಲೂಕು ಗುಡ್ಡೆ ಬಾವಗುತ್ತು ಸಪರಿವಾರ ನಾಗ ಬ್ರಹ್ಮಾದಿ ದೇವರ ಆಶ್ಲೇಷಾ ಬಲಿ ಮತ್ತು ಶ್ರೀ ರಕ್ತೇಶ್ವರಿ ದೈವದ ನೇಮೋತ್ಸವ ಮಾ. 30ರಂದು ನಡೆಯಲಿದೆ.
ಬಾವಗುತ್ತು ನಾಗಬ್ರಹ್ಮ ಸ್ಥಾನದಲ್ಲಿ ಬೆಳಿಗ್ಗೆ ಧಾರ್ಮಿಕ ವಿಧಿ ವಿಧಾನಗಳು ನಡೆದು ಆಶ್ಲೇಷಾ ಬಲಿಯಾಗಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ಬಾವಗುತ್ತು ಮನೆಯಿಂದ ಭಂಡಾರ ಇಳಿದು ರಾತ್ರಿ 8 ಗಂಟೆಗೆ ತಾಲೂಕು ಗುಡ್ಡೆ ಶ್ರೀ ರಕ್ತೇಶ್ವರಿ ಸನ್ನಿಧಾನದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆಯಾಗಿ ರಾತ್ರಿ 9 ಗಂಟೆಗೆ ಶ್ರೀ ರಕ್ತೇಶ್ವರಿ ದೈವದ ನೇಮೋತ್ಸವ ನಡೆಯಲಿದೆ ಎಂದು ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.



















































































error: Content is protected !!
Scroll to Top