ನಕಲಿ ಎನ್‌ಕೌಂಟರ್‌ : ಪೊಲೀಸ್‌ ಅಧಿಕಾರಿ ಪ್ರದೀಪ್‌ ಶರ್ಮಗೆ ಜೀವಾವಧಿ ಶಿಕ್ಷೆ

ಮುಂಬಯಿ : ನಕಲಿ ಎನ್‌ಕೌಂಟರ್‌ ಪ್ರಕರಣವೊಂದರಲ್ಲಿ ಹೈಕೋರ್ಟ್‌ ಮುಂಬಯಿಯ ಮಾಜಿ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಪ್ರದೀಪ್‌ ಶರ್ಮಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 2006ರಲ್ಲಿ ಸಂಭವಿಸಿದ ರಾಮ್‌ಪ್ರಸಾದ್‌ ಗುಪ್ತ ಎಂಬವರ ಎನ್‌ಕೌಂಟರ್‌ಗೆ ಸಂಬಂಧಪಟ್ಟು ಪ್ರದೀಪ್‌ ಶರ್ಮ ಅಪರಾಧಿ ಎಂದು ಸಾಬೀತಾಗಿದೆ.
ಬಾಂಬೆ ಹೈಕೋರ್ಟ್‌ 2013ರಲ್ಲಿ ಕೆಳಗಿನ ನ್ಯಾಯಾಲಯ ಈ ಪ್ರಕರಣದಲ್ಲಿ ಪ್ರದೀಪ್‌ ಶರ್ಮ ಅವರನ್ನು ನಿರ್ದೋಷಿ ಎಂದು ಸಾರಿ ನೀಡಿರುವ ತೀರ್ಪನ್ನು ರದ್ದುಪಡಿಸಿದ್ದು, ಮಾಜಿ ಪೊಲೀಸ್‌ ಅಧಿಕಾರಿಯೇ ಈ ಪ್ರಕರಣದ ಸೂತ್ರಧಾರ ಮತ್ತು ಮುಖ್ಯ ಪಾತಕಿ ಎಂದು ಸಾಬೀತಾಗಿದೆ ಎಂದು ಹೇಳಿ ಅಜೀವ ಕಾರಾಗೃಹ ವಾಸದ ಶಿಕ್ಷೆ ಪ್ರಕಟಿಸಿದೆ.
ಶರ್ಮ ವಿರುದ್ಧ ಅತ್ಯಂತ ಸ್ಪಷ್ಟವಾದ ಸಾಕ್ಷ್ಯಗಳಿದ್ದರೂ ವಿಚಾರಣಾ ನ್ಯಾಯಾಲಯ ಇವುಗಳನ್ನೆಲ್ಲ ಕಡೆಗಣಿಸಿ ಆರೋಪಿಯನ್ನು ನಿರ್ದೋಷಿ ಎಂದು ತೀರ್ಪು ನೀಡಿತ್ತು ಎಂದು ನ್ಯಾಯಾಲಯದ ಹೇಳಿದೆ. ಪೊಲೀಸರೂ ಸೇರಿ 13 ಮಂದಿಗೆ ಅಜೀವ ಕಾರಾಗೃಹ ವಾಸ ವಿಧಿಸಲಾಗಿದ್ದು, ಆರು ಮಂದಿಯನ್ನು ಖುಲಾಸೆಗೊಳಿಸಿದೆ. ಒಟ್ಟ 22 ಮಂದಿ ವಿರುದ್ಧ ಕೊಲೆ ಪ್ರಕರಣ ಹೊರಿಸಲಾಗಿತ್ತು. 2013ರಲ್ಲಿ ಸೆಶನ್ಸ್‌ ಕೋರ್ಟ್‌ ಶರ್ಮ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ಹೇಳಿ ಖುಲಾಸೆಗೊಳಿಸಿ ಉಳಿದ 21 ಆರೋಪಿಗಳಿಗೆ ಶಿಕ್ಷೆ ವಿಧಿಸಿತ್ತು.
2006, ನ.11ರಂದು ಪ್ರದೀಪ್‌ ಶರ್ಮ ನೇತೃತ್ವದ ಪೊಲೀಸ್‌ ತಂಡ ರಾಮ್‌ಪ್ರಸಾದ್‌ ಅಲಿಯಾಸ್‌ ಲಖನ್‌ ಭಯ್ಯಾ ಎಂಬವರನ್ನು ಅವರು ಭೂಗತ ಜಗತ್ತಿನ ದೊರೆ ಛೋಟಾ ರಾಜನ್‌ನ ಬಲಗೈ ಬಂಟ ಎಂದು ಹೇಳಿ ವಾಶಿಯಲ್ಲಿರುವ ಅವರ ಮನೆಯಿಂದ ಎತ್ತಾಕಿಕೊಂಡು ಹೋಗಿತ್ತು. ಅದೇ ದಿನ ರಾತ್ರಿ ವರ್ಸೋವಾದಲ್ಲಿ ಅವರನ್ನು ಎನ್‌ಕೌಂಟರ್‌ ಮಾಡಿ ಸಾಯಿಸಲಾಗಿತ್ತು. ಲಖನ್‌ ಭಯ್ಯಾನ ಸಹೋದರ ಇದು ನಕಲಿ ಎನ್‌ಕೌಂಟರ್‌ ಎಂದು ಆರೋಪಿಸಿ ದೂರು ದಾಖಲಿಸಿದ್ದರು.



















































































error: Content is protected !!
Scroll to Top