ಮಂಗಳೂರಿನಲ್ಲಿ ಅಸಾಧ್ಯವಾದದ್ದನ್ನು ಸಾಧಿಸಲು ಬಂದಿದ್ದೇವೆ : ಡಿ.ಕೆ.ಶಿವಕುಮಾರ್

ಬಿಜೆಪಿಗೆ ಮಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಪರೋಕ್ಷ ಎಚ್ಚರಿಕೆ

ಮಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಂಗಳೂರು ಹೊರವಲಯದ ಬಿ.ಸಿ.ರೋಡ್ ಆಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ ಮೈದಾನದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ಫೆ. 17ರಂದು ನಡೆಯಿತು. ರಾಜಕಾರಣ ಎನ್ನುವುದು ವಿಶ್ವಾಸದ ಕಲೆ, ನನಗೆ ಖಚಿತ ಭರವಸೆಯಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ ಜನ ಬದಲಾವಣೆಯನ್ನು ತರಲಿದ್ದಾರೆ. ಯಾಕೆಂದರೆ ಈ ಭಾಗದಲ್ಲಿರುವ ಪ್ರಮುಖ ಸಮಸ್ಯೆ ನಿರುದ್ಯೋಗ. ಯುವಕರು /ವಿದ್ಯಾರ್ಥಿಗಳು ಕೆಲಸವನ್ನು ಅರಸಿ ಮುಂಬೈ, ದುಬೈ, ಸೌದಿ, ಬೆಂಗಳೂರಿಗೆ ಹೋಗುತ್ತಿದ್ದಾರೆ. ಆಡಳಿತ ಮಂಡಳಿಯವರು, ಇಲ್ಲಿನ ಅಶಾಂತಿಯಿಂದಾಗಿ ವಿದ್ಯಾರ್ಥಿಗಳ ದಾಖಲಾತಿ ಕಮ್ಮಿಯಾಗುತ್ತಿದೆ ಎಂದು ಸಮಸ್ಯೆ ತೋಡಿಕೊಂಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ವಿದ್ಯಾರ್ಥಿಗಳು ಇಲ್ಲಿಂದ ಡ್ರಾಪೌಟ್ ಆಗುತ್ತಿದ್ದಾರೆ
ಶೈಕ್ಷಣಿಕವಾಗಿ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದಂತಹ ಜಿಲ್ಲೆಯಿದು. ಆದರೆ ವಿದ್ಯಾರ್ಥಿಗಳು ಇಲ್ಲಿಂದ ಡ್ರಾಪೌಟ್ ಆಗುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ, ಬಿಜೆಪಿಯವರು ಇಲ್ಲಿ ಧರ್ಮ, ಭಾವನೆಯ ಜೊತೆಗೆ ಆಟವಾಡಿಕೊಂಡು ಬರುತ್ತಿದ್ದಾರೆ. ಇಲ್ಲಿನ ಅಭಿವೃದ್ದಿ ವಿಚಾರ ಅಥವಾ ನಿರುದ್ಯೋಗದ ಬಗ್ಗೆ ಬಿಜೆಪಿಯವರಿಗೆ ಯಾವುದೇ ಕಾಳಜಿಯಿಲ್ಲ ಎನ್ನುವುದು ಸಾಬೀತಾಗಿ ಹೋಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಕಡಲತೀರಗಳ ಅಭಿವೃದ್ದಿಗೆ ಹೊಸ ಘೋಷಣೆಯನ್ನು ಬಜೆಟ್ ನಲ್ಲಿ ಪ್ರಕಟಿಸಿದ್ದೇವೆ
ಹೊಸ ಆಲೋಚನೆಯೊಂದಿಗೆ ಕಡಲತೀರಗಳ ಅಭಿವೃದ್ದಿಗೆ ಹೊಸ ಘೋಷಣೆಯನ್ನು ಬಜೆಟ್ ನಲ್ಲಿ ಪ್ರಕಟಿಸಿದ್ದೇವೆ. ಯಾವ ರೀತಿ ಅಭಿವೃದ್ದಿಯನ್ನು ಮಾಡಬಹುದು, ಉದ್ಯೋಗ ಸೃಷ್ಟಿಸಬಹುದು ಇದಕ್ಕೆ ಸಲಹೆಗಳನ್ನು ನೀಡಲು ಈ ಭಾಗದ ಜನರಿಗೆ ಕೇಳುತ್ತಿದ್ದೇವೆ. ಸಾಯಂಕಾಲ ಏಳು ಗಂಟೆಯಾದ ಮೇಲೆ ಇಲ್ಲಿ ಜನ ಸಂಚಾರವೇ ಇರುವುದಿಲ್ಲ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿನ ಈಗಿನ ಸಂಸದರಿಗೂ, ಹಿಂದಿನ ಸಂಸದರಿಗೂ ವ್ಯತ್ಯಾಸವಿದೆ. ಡಿ.ಕೆ.ಸುರೇಶ್ ದೆಹಲಿಯಲ್ಲಿ ಕೂತು ರಾಜಕಾರಣ ಮಾಡುವ ಸಂಸದನಲ್ಲ, ಹಳ್ಳಿ ಕೂತು ಕೆಲಸ ಗ್ರೌಂಡ್ ಲೆವೆಲ್ ವರ್ಕರ್. ರಾಜಕಾರಣದಲ್ಲಿ ಯಾರು ಯಾರ ಎದುರು ಬೇಕಾದರೂ ಸ್ಪರ್ಧಿಸಲಿ ಎಂದು ಡಿ.ಕೆ.ಶಿವಕುಮಾರ್ ಸವಾಲೆಸೆದಿದ್ದಾರೆ.



















































































error: Content is protected !!
Scroll to Top