ಫೆ. 22 : ಕೊಳಕೆ ಇರ್ವತ್ತೂರು ಏಲಡ್ಕ ಬರ್ಕೆ ನಾಗಬನದಲ್ಲಿ ಶ್ರೀ ನಾಗದೇವರ ಪುನ:ಪ್ರತಿಷ್ಠೆ – ಸಾನಿಧ್ಯ ಕಲಶಾಭಿಷೇಕ

ಕಾರ್ಕಳ : ಕೊಳಕೆ ಇರ್ವತ್ತೂರು ಏಲಡ್ಕ ಬರ್ಕೆ ನಾಗಬನದಲ್ಲಿ ಶ್ರೀ ನಾಗದೇವರ ಪುನ:ಪ್ರತಿಷ್ಠೆ ಹಾಗೂ ಸಾನಿಧ್ಯ ಕಲಶಾಭಿಷೇಕ ಫೆ. 22ರಂದು ನಡೆಯಲಿದೆ. ಬ್ರಹ್ಮಶ್ರೀ ಜಂಗರಬೆಟ್ಟು ವಿಷ್ಣುವರ್ಧನ್‌ ಭಟ್‌ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ.
ಫೆ. 21ರಂದು ಸಂಜೆ 5ಗಂಟೆಯಿಂದ ಶಿಲ್ಪಿ ಪೂಜೆ, ಸಾಮೂಹಿಕ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, 6ಗಂಟೆಯಿಂದ ಸಪ್ತಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ಪ್ರಾಕಾರ ಬಲಿ, ಬಿಂಬ ಶುದ್ಧಿ ಪ್ರಕ್ರಿಯೆ, ನಾಗಬಿಂಬ ಅಧಿವಾಸ ನಡೆಯಲಿದೆ.

ಫೆ. 22ರಂದು ಬೆಳಗ್ಗೆ 8.30ರಿಂದ ಪುಣ್ಯಾಹ, ಗಣಪತಿ ಹೋಮ, ನಾಗದೇವರಿಗೆ ಪಂಚವಿಂಶತಿ ಕಲಶ ಅಧಿವಾಸ, ಪ್ರಧಾನ ಹೋಮ, ಪ್ರಾಯಶ್ಚಿತ್ತ ಹೋಮ, ಆಶ್ಲೇಷ ಬಲಿ ಪ್ರಸನ್ನ ಪೂಜೆ, 11.28 ರಿಂದ 11.36ರ ವೃಷಭ ಲಗ್ನದಲ್ಲಿ ಶ್ರೀ ನಾಗದೇವರ ಪುನ:ಪ್ರತಿಷ್ಠೆ ಹಾಗೂ ಸಾನಿಧ್ಯ ಕಲಶಾಭಿಷೇಕ, ಮಧ್ಯಾಹ್ನ 12.45ಕ್ಕೆ ಮಹಾಪೂಜೆ, ವಟು ಬ್ರಾಹ್ಮಣ ಸುಹಾಸಿನ ಆರಾಧನೆ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಲಿದೆ.





























































































error: Content is protected !!
Scroll to Top