ಔಷಧೀಯ ಅಡ್ಡ ಪರಿಣಾಮ : 19ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ದಂಗಲ್‌ ನಟಿ

ದೆಹಲಿ : ಕಿರಿಯ ವಯಸ್ಸಿನಲ್ಲೇ ಬಣ್ಣದ ಲೋಕದಲ್ಲಿ ಮಿಂಚಿದ ನಟಿ 19ರ ಹರೆಯದಲ್ಲೇ ಇಹಲೋಕ ತ್ಯಜಿಸಿದ್ದಾರೆ. ಅಮಿರ್‌ ಖಾನ್‌ ಅಭಿನಯದ ದಂಗಲ್‌ ಸಿನಿಮಾದಲ್ಲಿ ಯುವ ಬಬಿತಾ ಪೋಗಾಟ್‌ ಪಾತ್ರವನ್ನು ನಿರ್ವಹಿಸಿದ್ದ ಸುಹಾನಿ ಭಟ್ನಾಗರ್‌ ಫೆ. 17ರಂದು ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

ಕಾಲು ಮುರಿತಕ್ಕೊಳಗಾಗಿ ಬಹಳ ಸಮಯ ಚಿಕಿತ್ಸೆಯಲ್ಲಿದ್ದ ಸುಹಾನಿ, ಪಡೆದುಕೊಂಡ ಔಷಧಿಗಳು ಅಡ್ಡ ಪರಿಣಾಮ ಬೀರಿತ್ತು. ಆ ಕಾರಣದಿಂದ ಅವರ ದೇಹ ದ್ರವತುಂಬಿ ಊದಿಕೊಂಡಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಏಮ್ಸ್‌ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.





























































































error: Content is protected !!
Scroll to Top