ಡಿಸಿ ವಿದ್ಯಾಕುಮಾರಿ ಉದ್ಘಾಟನೆ – ಸರಕಾರದ ನಿವೃತ್ತ ಸಿಎಸ್ ರತ್ನಪ್ರಭಾ ಭಾಗಿ
ಕಾರ್ಕಳ : ಮಹಿಳಾ ಉದ್ಯಮಿಗಳಿಗಾಗಿ ಡಿಜಿಟಲ್ ಸ್ಥಿತ್ಯಂತರ ಎಂಬ ಪರಿಕಲ್ಪನೆಯೊಂದಿಗೆ ಅ. 26ರಂದು ಉಡುಪಿಯ ಕೆಎಂಸಿ ಇಂಟರಾಕ್ಟ್ ಹಾಲ್‌ನಲ್ಲಿ ಡಿಜಿಟಲ್ ಕಾರ್ಯಾಗಾರ ನಡೆಯಲಿದೆ. ಉಬುಂಟು ಬೆಂಗಳೂರು ಮತ್ತು ಪವರ್ ಉಡುಪಿ ಸಹಯೋಗದಲ್ಲಿ ನಡೆಯುವ ಈ ಕಾರ್ಯಾಗಾರವನ್ನು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಉದ್ಘಾಟಿಸಲಿರುವರು. ಉಬುಂಟು ಸಂಸ್ಥೆಯ ಅಧ್ಯಕ್ಷೆ, ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಭಾಗವಹಿಸಲಿದ್ದಾರೆ.

ಅಂದು ಬೆಳಗ್ಗೆ 9.30ರಿಂದ ಸಂಜೆ 4ರ ತನಕ ಕಾರ್ಯಾಗಾರ ಜರುಗಲಿದ್ದು, ಮಹಿಳೆಯರು ವ್ಯಾಪಾರವನ್ನು ಹೇಗೆ ಅಭಿವೃದ್ಧಿಪಡಿಸಬಹುದು ಮತ್ತು ತಮ್ಮ ಉದ್ಯಮದಲ್ಲಿ ಸಾಮಾಜಿಕ ಜಾಲತಾಣವನ್ನು ಯಾವ ರೀತಿ ಪರಿಣಾಮಕಾರಿಯಾಗಿ ಬಳಸಬಹುದು ಎಂಬ ಕುರಿತು ಮಾಹಿತಿ ನೀಡಲಾಗುವುದು. ಅಲ್ಲದೇ UNESCAP ಇ – ಕಾಮರ್ಸ್ ಪೋರ್ಟಲ್ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಆನ್‌ಬೋರ್ಡ್ ಆಗಲು ಒಂದು ಅಪೂರ್ವ ಅವಕಾಶ ಕಲ್ಪಿಸಲಾಗುವುದು ಎಂದು ಉಬುಂಟು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ನೋಂದಾವಣೆಗಾಗಿ : https://forms.gle/2ZUW5Gr2wgNG6c1a8

ಹೆಚ್ಚಿನ ಮಾಹಿತಿಗಾಗಿ 9480298800 (ಉಬುಂಟು ಬೆಂಗಳೂರು) ಮತ್ತು 9845833694 (ಪವರ್ ಉಡುಪಿ) ಸಂಪರ್ಕಿಸಬಹುದಾಗಿದೆ.










































