ಮಣಿಪಾಲ : ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮೇಲೆ ದಾಳಿ – ಇಬ್ಬರು ಪೊಲೀಸರ ವಶಕ್ಕೆ

ಉಡುಪಿ : ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಗೆ ದಾಳಿ ನಡೆಸಿದ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದ ಘಟನೆ ಮಣಿಪಾಲದ ಹೆರ್ಗಾ ಗ್ರಾಮದಲ್ಲಿ ಸೋಮವಾರದಂದು ನಡೆದಿದೆ. ಖಚಿತ ಮಾಹಿತಿಯಂತೆ ಮಣಿಪಾಲ ಇನ್ಸ್ಪೆಕ್ಟರ್ ದೇವರಾಜ್‌ ಟಿ.ವಿ ನೇತೃತ್ವದಲ್ಲಿ ಹೆರ್ಗಾ ಗ್ರಾಮದ ಸರಳಬೆಟ್ಟಿನ ಮನೆ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಶಿವರಾಜ (38) ಮಂಡ್ಯ ಮತ್ತು ನಿಂಗಪ್ಪ ಅಂಬಿಗೇರಾ (29) ಬಾಗಲಕೋಟೆ ಎಂಬರನ್ನು ವಶಕ್ಕೆ ಪಡೆಯಲಾಗಿದೆ. ಇನ್ನೊರ್ವ ಆಪಾದಿತ ನವೀನ್‌ಗೌಡ ಎಂಬಾತ ತಲೆಮರೆಸಿಕೊಂಡಿದ್ದಾನೆ. ಇದೇ ವೇಳೇ ಆರೋಪಿಗಳ 2 ಮೊಬೈಲ್‌ ಪೋನ್‌ಗಳು, ನಗದು 15000 ರೂ, ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 257/2023 ಕಲಂ: 370 (A) (2) IPC & 3, 4, 5, 6, ITP ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.





























































































































error: Content is protected !!
Scroll to Top