ಹುಡುಗ, ಹುಡುಗಿ ಇಬ್ಬರೆ ಹೋಗಿ ತಾಳಿ ಕಟ್ಕೊಂಡ್ ಬಂದ್ರೆ ಅದನ್ನ ಮದ್ವೆ ಅನ್ನೋಕಾಗುತ್ತಾ ?

ಜೆಡಿಎಸ್‌ – ಬಿಜೆಪಿ ಮೈತ್ರಿ ಬಗ್ಗೆ ಪ್ರಶ್ನಿಸಿದ ಸಿ.ಎಂ. ಇಬ್ರಾಹೀಂ

ಬೆಂಗಳೂರು : ಯಾರೋ ಒಬ್ಬ ಯವಕ, ತನ್ನಿಷ್ಟದ ಯುವತಿಯೊಬ್ಬಳನ್ನು ಕರೆದುಕೊಂಡು ಹೋಗಿ ತಾಳಿ ಕಟ್ಕೊಂಡು ಬಂದು ಬಿಟ್ರೆ ಈ ಸಮಾಜ ಅದನ್ನು ಮದುವೆ ಅಂತ ಒಪ್ಪಿಕೊಳ್ಳುತ್ತಾ ? ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹೀಂ ಜೆಡಿಎಸ್ – ಬಿಜೆಪಿ ಮೈತ್ರಿ ಬಗ್ಗೆ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಮಾತುಕತೆಗಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರು ದೆಹಲಿಗೆ ಹೋಗಿ ಬಂದಿದ್ದಾರೆ. ಆದರೆ, ಪಕ್ಷದ ರಾಜ್ಯಾಧ್ಯಕ್ಷನಾದ ನನ್ನಲ್ಲಿ ಸಹ ಅವರು ಒಂದು ಮಾತನ್ನೂ ಹೇಳಿಲ್ಲ. ನನಗೆ ಒಂದು ಮಾತು ಹೇಳಿದ್ದರೆ. ನಾನು ಸಹ ಹೋಗಿ ಬನ್ನಿ ಎಂದು ಹೇಳುತ್ತಿದ್ದೆನಷ್ಟೇ. ಆದರೆ, ಅವರು ನನ್ನಿಂದಲೂ ಇದನ್ನು ಮುಚ್ಚಿಟ್ಟಿದ್ದರು ಎಂದು ಹೇಳಿದ್ದಾರೆ.

ಮೈತ್ರಿ ಎಂಬ ವಿಚಾರ ಯಾವತ್ತೂ ಪಕ್ಷ ಮತ್ತು ಪಕ್ಷದ ನಡುವೆ ಆಗಬೇಕೇ ಹೊರತು, ಒಂದಿಬ್ಬರು ನಾಯಕರ ನಡುವೆ ಆಗಬಾರದು ಎಂದು ಮಾರ್ಮಿಕವಾಗಿ ಹೇಳಿದ ಅವರು, ಅಸಲಿಗೆ ರಾಜ್ಯದಲ್ಲಿ ಈ ಮೈತ್ರಿಯು ಯಾರಿಗೆ ಅನಿವಾರ್ಯವಾಗಿತ್ತು? ಬಿಜೆಪಿಗೋ ಅಥವಾ ಜೆಡಿಎಸ್‌ಗೋ ಎಂದು ಅವರು ಮರು ಪ್ರಶ್ನೆ ಹಾಕಿದರು. ಇಬ್ರಾಹೀಂ ಅವರ ಈ ಮಾತುಗಳು, ಮೈತ್ರಿಯ ಬಗ್ಗೆ ಅವರಿಗಿರುವ ಅಸಮಾಧಾನ ಹಾಗೂ ಮೈತ್ರಿ ವಿಚಾರದಲ್ಲಿ ರಾಜ್ಯಾಧ್ಯಕ್ಷರಾಗಿದ್ದ ತಮ್ಮನ್ನು ನಡೆಸಿಕೊಂಡ ರೀತಿಗಳ ಬಗ್ಗೆ ಅವರಲ್ಲಿರುವ ಬೇಸರವನ್ನು ಎತ್ತಿ ತೋರಿಸಿವೆ. ಆದರೂ, ಪಕ್ಷದ ನಾಯಕರ ಜೊತೆಗೆ ತಾವು ಇರುವುದಾಗಿ ಅವರು ಸ್ಪಷ್ಪಪಡಿಸಿದ್ದಾರೆ.





























































































































error: Content is protected !!
Scroll to Top