ಕಿರುತೆರೆ ನಟ ನಿತೇಶ್ ಪಾಂಡೆ ಹೃದಯಾಘಾತದಿಂದ ನಿಧನ

ಕಿರುತೆರೆ ಮೂಲಕ ಫೇಮಸ್ ಆದ ನಟ ನಿತೇಶ್ ಪಾಂಡೆ ಅವರು ಮೇ 24ರಂದು ನಿಧನ ಹೊಂದಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು. ನಿತೇಶ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕೇವಲ ಕಿರುತೆರೆ ಮಾತ್ರವಲ್ಲದೆ ಹಿರಿತೆರೆಯ ಮೂಲಕವೂ ನಿತೇಶ್ ಪಾಂಡೆ ಫೇಮಸ್ ಆಗಿದ್ದರು. ಅಭಿಮಾನಿಗಳಿಗೆ ಈ ಸಾವಿನ ಸುದ್ದಿ ಸಾಕಷ್ಟು ದುಃಖ ತಂದಿದೆ.

1995ರಿಂದ ನಿತೇಶ್ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಧಾರಾವಾಹಿಗಳ ಜೊತೆ ಸಿನಿಮಾ ಕೂಡ ಮಾಡಿದ್ದಾರೆ. ಅನುಪಮಾ ಧಾರಾವಾಹಿ ಹಿಂದಿಯ ಸ್ಟಾರ್ ಪ್ಲಸ್​ನಲ್ಲಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಯಲ್ಲಿ ಧೀರಜ್ ಕಪೂರ್ ಹೆಸರಿನ ಪಾತ್ರವನ್ನು ಅವರು ಮಾಡುತ್ತಿದ್ದರು. ‘ಪ್ಯಾರ್​ ಕ ದರ್ದ್​ ಹೈ ಮೀಟಾ ಮೀಟಾ ಪ್ಯಾರಾ ಪ್ಯಾರಾ’ ಧಾರಾವಾಹಿಯಲ್ಲಿ ನಟಿಸಿ ಫೇಮಸ್ ಆದರು. ಈಗ ನಿತೇಶ್ ಏಕಾಏಕಿ ಮೃತಪಟ್ಟಿದ್ದು ಅನೇಕರಿಗೆ ಆಘಾತ ತಂದಿದೆ.

ಇತ್ತೀಚೆಗೆ ಹಿಂದಿ ಕಿರುತೆರೆಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಕೆಲವೇ ಕೆಲವು ದಿನಗಳ ಹಿಂದೆ ಕಿರುತೆರೆ ನಟ, ಮಾಡೆಲ್ ಆದಿತ್ಯ ಸಿಂಗ್ ರಜಪೂತ್ ಮೃತಪಟ್ಟರು. ಅವರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದಾದ ಬೆನ್ನಲ್ಲೇ ಮಂಗಳವಾರ ಕಿರುತೆರೆ ನಟಿ ವೈಭವಿ ಉಪಾಧ್ಯಾಯ ಅವರು ಮೃತಪಟ್ಟಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅವರು ಕೊನೆಯುಸಿರು ಎಳೆದರು. ಅವರ ಸಾವು ಅನೇಕರಿಗೆ ಆಘಾತ ತಂದಿದೆ.





























































































































error: Content is protected !!
Scroll to Top