ಮಾ. 11 : ಶ್ರೀ ಬಾಲಾಜಿ ಅಯ್ಯಪ್ಪ ಮಂದಿರದ ಪ್ರತಿಷ್ಠಾ ವರ್ಧಂತ್ಯುತ್ಸವ

ಕಾರ್ಕಳ : ಶ್ರೀ ಬಾಲಾಜಿ ಅಯ್ಯಪ್ಪ ಮಂದಿರ ರಕ್ತೇಶ್ವರಿ ನಾಗಬ್ರಹ್ಮ ಬನ ಬೈಲಡ್ಕ ಕುಂಟಲ್ಪಾಡಿ ಇಲ್ಲಿಯ ಪ್ರತಿಷ್ಠಾ ವರ್ಧಂತ್ಯುತ್ಸವವು ಮಾ. 11 ರಂದು ಜರುಗಲಿದೆ. ಅಂದು ಬೆಳಗ್ಗೆ 7 ಗಂಟೆಗೆ ಶ್ರೀ ದೇವರ ಪ್ರಾರ್ಥನೆ, ತೋರಣ ಮುಹೂರ್ತ ಬಳಿಕ ನವಕ ಪ್ರಧಾನ ಕಲಶಾಭಿಷೇಕ ಮತ್ತು ಬನದೇವರಿಗೆ ತನು ತಂಬಿಲ ಸೇವೆ ನಡೆಯಲಿದೆ. 10:30 ಗಂಟೆಗೆ ಸಾಣೂರು ಕೆ. ರಾಮಚಂದ್ರ ಆಚಾರ್ಯ ಮತ್ತು ಬಳಗದವರಿಂದ ಭಕ್ತಿ ಗಾನ ಲಹರಿ ಸಂಗೀತ ಕಾರ್ಯಕ್ರಮ, 12:30ಕ್ಕೆ ಮಹಾಪೂಜೆ ನಂತರ ಅನ್ನಸಂತರ್ಪಣೆ ನಡಯಲಿದೆ. ಸಂಜೆ 5 ರಿಂದ 7 ಗಂಟೆಯವರೆಗೆ ಶಂಕರ ಸೇವಾ ಸಮಿತಿ ಮತ್ತು ಮಾತೃಮಂಡಳಿ ಬಾಲಾಜಿ ಅಯ್ಯಪ್ಪ ಮಂದಿರದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಮಂದಿರದ ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.





























































































































error: Content is protected !!
Scroll to Top