ಆರೋಗ್ಯಧಾರ : ಕ್ಯಾಲ್ಸಿಯಂ ಕೊರತೆಯನ್ನು ದೂರ ಮಾಡಿ

ನಮ್ಮ ದಂತ ಹಾಗೂ ಎಲುಬು ಸದೃಢವಾಗಿರಲು ಕ್ಯಾಲ್ಸಿಯಂ ಅತಿ ಅವಶ್ಯಕ ಇದಲ್ಲದೆ ಕ್ಯಾಲ್ಸಿಯಂ ನಮ್ಮ ಹೃದಯ, ಮಾಂಸ ಖಂಡ ಹಾಗೂ ನರಗಳ ಕಾರ್ಯಗಳಿಗೂ ಬೇಕಾಗುತ್ತದೆ. ವಯಸ್ಸು ಆಗುತ್ತಾ ನಮಗೆ ಕ್ಯಾಲ್ಸಿಯಂ ಕೊರತೆ ಕಾಣಿಸಿಕೊಳ್ಳುತ್ತದೆ. ಎಲುಬಿನ ಸಾಂದ್ರತೆ ಕಮ್ಮಿಯಾಗುತ್ತದೆ. ಇದನ್ನು ತಡೆಯಲು ದಿನನಿತ್ಯ ನಾವು ನಮ್ಮ ಆಹಾರದಲ್ಲಿ ಕ್ಯಾಲ್ಸಿಯಂಯುಕ್ತ ಆಹಾರವನ್ನು ಸೇವಿಸಬೇಕು.
ದಿನನಿತ್ಯ ಕ್ಯಾಲ್ಸಿಯಂನ ಅವಶ್ಯಕತೆ
ಗಂಡಸರಿಗೆ -600 1200mg
ಹೆಂಗಸರಿಗೆ – 500 -1000mg
ಮಕ್ಕಳಿಗೆ – 400 – 700mg
ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರಿಗೆ- 1200mg
ಕ್ಯಾಲ್ಸಿಯಂ ಯುಕ್ತ ಆಹಾರಗಳು
• ಬೇಳೆ ಕಾಳುಗಳಲ್ಲಿ ರಾಗಿ, ರಾಜ್ಮಾ, ಸೋಯ, ಹುರುಳಿ, ಗೋಧಿ, ಎಳ್ಳು, ಕಡಲೆ ಕಾಳಿನಲ್ಲಿ ಅಧಿಕ ಕ್ಯಾಲ್ಸಿಯಂ ಇರುತ್ತದೆ. ರಾಗಿ ಹಾಲು, ರಾಗಿ ಮಣ್ಣಿ, ರಾಗಿ ರೊಟ್ಟಿ, ಗಂಜಿ ಮಾಡಿ ಕುಡಿಯಬಹುದು. ಬೇಳೆ ಕಾಳುಗಳ ಪದಾರ್ಥ ಮಾಡಿ ಸೇವಿಸಬಹುದು.
• ಡ್ರೈ ಫ್ರೂಟ್ಸ್( ಒಣ ಹಣ್ಣುಗಳು )- ಬಾದಾಮಿ, ಗೇರುಬೀಜ, ವಾಲ್ನೆಟ್, ಖರ್ಜೂರ ಇದರಲ್ಲಿ ಕ್ಯಾಲ್ಸಿಯಂ ಅಧಿಕವಿರುತ್ತದೆ. ದಿನಾಲು ಯಾವುದಾದರು ಒಂದು ಬಗೆಯ ಡ್ರೈ ಫ್ರೂಟ್ಸ್ ಅನ್ನು ಆರರಿಂದ ಏಳು ಬೀಜವನ್ನು ರಾತ್ರಿ ನೀರಿನಲ್ಲಿ ನೆನೆಸಿ ಮರುದಿನ ಸೇವಿಸಬಹುದು.
• ತರಕಾರಿಗಳಲ್ಲಿ ಕ್ಯಾಬೇಜ್, ಕಾಲಿಫ್ಲವರ್, ಬೆಂಡೆಕಾಯಿ, ಶುಂಠಿ, ಹಸಿರು ಸೊಪ್ಪುಗಳು, ನುಗ್ಗೆ ಸೊಪ್ಪು, ಮೆಂತೆ ಸೊಪ್ಪು, ಪಾಲಕ ಬಳಸಬಹುದು.
• ಹಣ್ಣುಗಳಲ್ಲಿ ಪಪ್ಪಾಯ ಹಾಗೂ ಕಿತ್ತಳೆ ಹಣ್ಣಿನಲ್ಲಿ ಕ್ಯಾಲ್ಸಿಯಂ ಅಧಿಕವಿರುತ್ತದೆ.
• ಮಸಾಲೆ ಪದಾರ್ಥಗಳಲ್ಲಿ ಗಸಗಸೆ ಹಾಗೂ ಸೊಂಪಿನಲ್ಲಿ ಅಧಿಕವಿರುತ್ತದೆ.
• ಕ್ಯಾಲ್ಸಿಯಂ ಮಟ್ಟವನ್ನು ಸುಧಾರಿಸಲು ನೆಲ್ಲಿಕಾಯಿ, ಅಲೋವೆರಾ, ಅಶ್ವಗಂಧ, ಶತಾವರಿ, ಅಮೃತಬಳ್ಳಿ, ಅರ್ಜುನವನ್ನು ಉಪಯೋಗಿಸಬಹುದು.

ನಾವು ಸೇವಿಸಿದ ಆಹಾರದಲ್ಲಿನ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳುವುದು ಬಹಳ ಅವಶ್ಯಕ. ಇದರಲ್ಲಿ ವಿಟಮಿನ್ ಡಿ ಬಹಳ ಮುಖ್ಯ ಪಾತ್ರವಹಿಸುತ್ತದೆ. ನಮಗೆ ವಿಟಮಿನ್ ಡಿ ಸೂರ್ಯನ ಕಿರಣಗಳಿಂದ ಲಭ್ಯವಾಗುತ್ತದೆ. ಆದ್ದರಿಂದ ದಿನಾಲು 30 ಅಥವಾ 45 ನಿಮಿಷಗಳ ಕಾಲ ಬಿಸಿಲಿಗೆ ಮೈಯನ್ನು ಒಡ್ಡಬೇಕು. ಬೆಳಿಗ್ಗೆ ಎಂಟು ಗಂಟೆಯ ಮೊದಲು ಹಾಗೂ ಸಂಜೆ ನಾಲ್ಕರ ನಂತರ ಬಿಸಿಲಿನಲ್ಲಿ ನಡೆಯಿರಿ. ಕ್ಯಾಲ್ಸಿಯಂ ಹೀರಿಕೊಳ್ಳದೆ ಇರಲು ಇತರ ಕಾರಣಗಳು- ಅಜೀರ್ಣ, ಅಧಿಕ ಉಪ್ಪಿನ ಸೇವನೆ ,ಅಧಿಕ ದುಮ್ರಪಾನ, ಅಧಿಕ ಚಹಾ ಹಾಗೂ ಕಾಫಿಯ ಸೇವನೆ, ದೇಹದಲ್ಲಿನ ಕೊಬ್ಬು.

ಕ್ಯಾಲ್ಸಿಯಂನ ಅಧಿಕ ಸೇವನೆಯೂ ಕೂಡ ಒಳ್ಳೆಯದಲ್ಲ. ಹೆಚ್ಚಾದರೆ ಕಿಡ್ನಿ ಸ್ಟೋನ್ ಆಗುವ ಸಾಧ್ಯತೆ ಇರುತ್ತದೆ. ವೈದ್ಯರನ್ನು ಕೇಳದೆ ಕ್ಯಾಲ್ಸಿಯಂ ಮಾತ್ರೆಯನ್ನು ಸೇವಿಸಬೇಡಿ. ಬೋನ್ ಡೆನ್ಸಿಟಿ ಟೆಸ್ಟ್ ಮಾಡಿಸಿದ ಮೇಲೆ ವೈದ್ಯರು ನಿಮಗೆ ಅವಶ್ಯಕತೆ ಇದ್ದರೆ ಮಾತ್ರ ಮಾತ್ರೆಯನ್ನು ನಿಗದಿತ ಸಮಯಕ್ಕೆ ಮಾತ್ರೆಯನ್ನು ಸೇವಿಸಲು ಸಲಹೆ ನೀಡುತ್ತಾರೆ. ಅಷ್ಟು ಮಾತ್ರ ಸೇವಿಸುವುದು ಒಳ್ಳೆಯದು. ತಿಂಗಳುಗಟ್ಟಲೆ ಮಾತ್ರೆಯನ್ನು ವೈದ್ಯರನ್ನು ಕೇಳದೆ ಸೇವಿಸಬಾರದು.

ಕ್ಯಾಲ್ಸಿಯಂ ಕೊರತೆಯ ಲಕ್ಷಣಗಳು-
ದೇಹದಲ್ಲಿ ಕ್ಯಾಲ್ಸಿಯಂ ಲೆವೆಲ್ ಕಮ್ಮಿ ಆದರೆ ಮಾಂಸ ಖಂಡದಲ್ಲಿ ನೋವು, ಸೆಳೆತ, ಕೈಕಾಲುಗಳಲ್ಲಿ ಮರಗಟ್ಟುವಿಕೆ, ತ್ವಚೆಯ ಶುಷ್ಕತೆ, ಹೃದಯ ಬಡಿತ ಅಧಿಕವಾಗುವುದು ಕಾಣಿಸಬಹುದು. ಕ್ಯಾಲ್ಸಿಯಂ ಪೂರೈಸಲು ಆಯುರ್ವೇದ ಔಷಧಗಳು- ಶಂಕ ಬಸ್ಮ, ಪ್ರವಾಳ ಪಿಸ್ಟಿ, ಮುಕ್ತ ಬಸ್ಮ, ಶುಕ್ತಿ ಭಸ್ಮ.
ಡಾ. ಹರ್ಷಾ ಕಾಮತ್





























































































































error: Content is protected !!
Scroll to Top