ಹೆಬ್ರಿ : ಕಾರಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಗಾಯಗೊಂಡ ಘಟನೆ ಹೆಬ್ರಿಯಲ್ಲಿ ಫೆ. 8ರ ಮುಂಜಾನೆ ಸಂಭವಿಸಿದೆ. ಸುದರ್ಶನ್ ಎಂಬುವವರು ಮಾರುತಿ ಡಿಝರ್ ಕಾರಿನಲ್ಲಿ ಸಿದ್ಧಾಪುರದಿಂದ ಹೆಬ್ರಿ ಜಂಕ್ಷನ್ ತಲುಪಿ ಮೂಡುಬಿದ್ರೆಗೆ ಕಡೆಗೆ ಹೋಗುತ್ತಿರುವಾಗ ಸೊಮೇಶ್ವರ ಕಡೆಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಟಿಪ್ಪರ್ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರು ಜಖಂ ಆಗಿದ್ದು, ಸುದರ್ಶನ್ ಶೆಟ್ಟಿಯವರು ಗಾಯಗೊಂಡಿದ್ದಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಹೆಬ್ರಿ : ಕಾರಿಗೆ ಟಿಪ್ಪರ್ ಡಿಕ್ಕಿ – ಚಾಲಕನಿಗೆ ಗಾಯ






























































