ಕಾರ್ಕಳ : ಹಿರ್ಗಾನ ಪ್ರೌಢಶಾಲಾ ಶಿಕ್ಷಕ ಸಂತೋಷ್ ಕುಮಾರ್ ಶೆಟ್ಟಿ ಅವರು ಕಾರ್ಕಳ ತಾಲೂಕು ಯುವಜನ ಸೇವೆ ಮತ್ತು ಕ್ರೀಡಾಧಿಕಾರಿಯಾಗಿ ಫೆ. 7ರಂದು ಅಧಿಕಾರ ಸ್ವೀಕರಿಸಿದ್ದಾರೆ. ಈ ಮೊದಲು ಯುವಜನ ಸೇವೆ ಮತ್ತು ಕ್ರೀಡಾಧಿಕಾರಿಯಾಗಿದ್ದ ರಿತೇಶ್ ಶೆಟ್ಟಿ ಅವರು ಕಳೆದ ವರ್ಷ ಕಾಪು ಮಲ್ಲಾರು ಶಾಲೆಗೆ ವರ್ಗಾವಣೆಗೊಂಡಿದ್ದು, ಕಾರ್ಕಳ ಹಾಗೂ ಕಾಪು ಯವಜನ ಸೇವೆ ಮತ್ತು ಕ್ರೀಡಾ ಅಧಿಕಾರಿಯಾಗಿ ಪ್ರಭಾರವನ್ನೂ ವಹಿಸಿಕೊಂಡಿದ್ದರು. ಇವರು ಸೂಡ ಪ್ರೌಢಶಾಲೆಯಲ್ಲಿ 25 ವರ್ಷಗಳ ಕಾಲ ಶಿಕ್ಷಕನಾಗಿ ಕಾರ್ಯನಿರ್ವಹಿಸಿದ್ದರು.
ಮಂಗಳವಾರ ರಿತೇಶ್ ಶೆಟ್ಟಿಯವರು ಸಂತೋಷ್ ಕುಮಾರ್ ಶೆಟ್ಟಿಯವರಿಗೆ ಕಾರ್ಕಳ ತಾಲೂಕು ಯುವಜನ ಸೇವೆ ಮತ್ತು ಕ್ರೀಡಾಧಿಕಾರಿಯ ಪ್ರಭಾರವನ್ನು ಹಸ್ತಾಂತರಿಸಿದ್ದಾರೆ.
ಕಾರ್ಕಳ : ಯುವಜನ ಸೇವೆ ಮತ್ತು ಕ್ರೀಡಾಧಿಕಾರಿಯಾಗಿ ಸಂತೋಷ್ ಕುಮಾರ್ ಶೆಟ್ಟಿ






























































