ಬಾಲಕರ ವಿಭಾಗದಲ್ಲಿ ಅತ್ಯುತ್ತಮ ಸಾಧನೆ
ಕಾರ್ಕಳ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ರೈಸ್ಟ್‌ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಅ.20ರಂದು ಸ್ಥಳೀಯ ಗಾಂಧಿ ಮೈದಾನದಲ್ಲಿ ನಡೆದ ವೃತ್ತಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಕಾರ್ಕಳದ ಕ್ರೈಸ್ಟ್‌ಕಿಂಗ್ ಆಂಗ್ಲಮಾಧ್ಯಮ ಶಾಲೆ ಸಮಗ್ರ ಚಾಂಪಿಯನ್ ಪ್ರಶಸ್ತಿಯ ಜೊತೆಗೆ ಬಾಲಕರ ವಿಭಾಗದಲ್ಲಿಯು ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಏಳನೇ ತರಗತಿಯ ಶ್ರೇಯಸ್ ದೇವಾಡಿಗ 400ಮೀ ಓಟ ಪ್ರಥಮ ಹಾಗೂ 600ಮೀ ಓಟ ದ್ವಿತೀಯ, ಮುಝಾಮ್ಮಿಲ್ ಎತ್ತರ ಜಿಗಿತ ಹಾಗೂ ಹರ್ಡಲ್ಸ್ ಪ್ರಥಮ ಹಾಗು ಉದ್ದ ಜಿಗಿತ ತೃತೀಯ, ಸಂಗಮ್ 600ಮೀ ಓಟ ತೃತೀಯ, ಸೃಜನ್ ಶೆಟ್ಟಿ ಗುಂಡೆಸೆತ ಹಾಗೂ ಡಿಸ್ಕಸ್ ಪ್ರಥಮ, ಆರನೇ ತರಗತಿಯ ಆಯುಶ್ರೀ ಎತ್ತರ ಜಿಗಿತ ಪ್ರಥಮ, ಹರ್ಡಲ್ಸ್ ತೃತೀಯ, ಹುಡುಗರ ರಿಲೇ ತಂಡ ಪ್ರಥಮ, ಹುಡುಗಿಯರ ರಿಲೇ ತಂಡ ತೃತೀಯ ಸ್ಥಾನ ಪಡೆಯುವುದರ ಮೂಲಕ ಸಮಗ್ರ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಅತ್ಯುತ್ತಮ ಸಾಧನೆಯೊಂದಿಗೆ ಬಾಲಕರ ವಿಭಾಗದಲ್ಲಿಯೂ ಚಾಂಪಿಯನ್ ಪ್ರಶಸ್ತಿ ಪಡೆಯಿತು.




































































