‘ಪ್ರಕೃತಿ ಐಕ್ಯಂ’- ಹಳೆ ವಿದ್ಯಾರ್ಥಿಗಳ ಸಮ್ಮಿಲನ
ಸಾಣೂರು: ಪ್ರಕೃತಿ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಸಲಹಾ ಸಮಿತಿ ಉದ್ಘಾಟನಾ ಕಾರ್ಯಕ್ರಮ ಹಾಗೂ ‘ಪ್ರಕೃತಿ ಐಕ್ಯಂ’ ಎಂಬ ಹೆಸರಿನಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವು ಅ.15 ರಂದು ನಡೆಯಿತು.
ಸಲಹಾ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಮಂಗಳೂರು ಶ್ರೀನಿವಾಸ ಕಾಲೇಜಿನ ಡಾ .ಜಯಶ್ರೀ, ಬೆಂಗಳೂರು ಲೀಡ್ ಮಾಸ್ಟರ್ ಅಕಾಡೆಮಿಕ್ ವಲೀಡ್ಟರಿನ ಡಾ. ರಾಖಿ ಮಥಾಯ್ ಆಂಟೋನಿ, ಗೋವಾ ಹೆಡ್ ಆಫ್ ದಿ ಡಿಪಾರ್ಟ್ ಮೆಂಟ್ ಜೊವಾಲಜಿಯ ಡಾ. ನಂದಿನಿ, ಅಳಿಕೆ ಶ್ರೀ ಸತ್ಯ ಸಾಯಿ ಪ್ರೌಢ ಶಾಲೆಯ ರಘು ಟಿ. ವೈ, ಮೂಡುಬಿದ್ರೆಯ ವಕೀಲ ನಾಗೇಶ್ ಶೆಟ್ಟಿ ಬಿ., ಸಾಣೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಕರುಣಾಕರ್ ಎಸ್. ಕೋಟ್ಯಾನ್, ಬೆಂಗಳೂರು ಪಾಟ್ನರ್ ಆಫ್ ಫೈನಾನ್ಸ್ ವಿ ಅಂಡ್ ಟ್ಯಾಕ್ಸ್ ಕನ್ಸಲ್ಟ್ ನ ಗೋಕುಲ ಎಂ .ವಿ., ಅವರಿಗೆ ಸಮಿತಿಯ ಉದ್ಘಾಟಕರಾದ ಸಂಸ್ಥೆಯ ಅಧ್ಯಕ್ಷ ಕ್ರಿಸ್ಪಿನ್ ಜೆರಾಲ್ಡ್ ಕ್ರಾಸ್ಟ್ ಪದಗ್ರಹಣ ಮಾಡಿದರು. ‘ಪ್ರಕೃತಿ ಐಕ್ಯಂ’ ಎಂಬ ಹೆಸರಿನಲ್ಲಿ ನಡೆದ ಸಮ್ಮಿಲನ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದ ಸುಂದರ ಕ್ಷಣಗಳನ್ನು ಮೆಲುಕು ಹಾಕುವ ಮೂಲಕ ಸಂಸ್ಥೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಅಶೋಕ್ ಕುಮಾರ್ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊಫೆಸರ್ ಪದ್ಮನಾಭ ಗೌಡ ಉಪಸ್ಥಿತರಿದ್ದರು. ಆಡಿಳಿತಾಧಿಕಾರಿ ಕು. ಮಮತ ಶರ್ಮ ಸ್ವಾಗತಿಸಿ, ಪ್ರೌಢಶಾಲೆಯ ಪ್ರಾಂಶುಪಾಲ ಪ್ರಸಾದ್ ಕಾರ್ಯಕ್ರಮ ನಿರೂಪಿಸಿ, ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಕು. ವಿನ್ಯಾರ ವಂದಿಸಿದರು.