ಗಂಡ ಹೆಂಡತಿ ಜಗಳದಲ್ಲಿ ಕೊಲೆಯಾದದ್ದು ನೆರೆಮನೆಯವ

ಮಟನ್‌ ಪದಾರ್ಥ ಮಾಡುವ ಜಗಳ ಬಿಡಿಸಲು ಹೋದವನಿಗೆ ಧರ್ಮದೇಟು

ಭೋಪಾಲ: ಗಂಡ ಹೆಂಡತಿ ಜಗಳದಲ್ಲಿ ಮೂರನೆಯವರು ಮಧ್ಯ ಪ್ರವೇಶಿಸಬಾರದು ಎನ್ನುವುದು ಯಾಕೆ ಎನ್ನುವುದಕ್ಕೆ ಮಧ್ಯಪ್ರದೇಶದ ಈ ಘಟನೆಯೇ ಸಾಕ್ಷಿ. ಗಂಡ ಹೆಂಡತಿಯ ಜಗಳ ಬಿಡಿಸಲು ಹೋಗಿ ನೆರೆ ಮನೆಯ ಬಡಪಾಯಿ ವ್ಯಕ್ತಿಯೇ ಇಲ್ಲಿ ಕೊಲೆಯಾಗಿದ್ದಾನೆ.
ಪಪ್ಪು ಐರಾವರ್‌ ಮತ್ತು ಹೆಂಡತಿ ನಡುವೆ ಮಂಗಳವಾರ ಮಟನ್‌ ಪದಾರ್ಥ ಮಾಡುವ ವಿಚಾರವಾಗಿ ರಣಭಯಂಕರ ಜಗಳವಾಗುತ್ತಿತ್ತು. ಮಂಗಳವಾರ ಪವಿತ್ರ ದಿನವಾಗಿರುವುದರಿಂದ ಮಟನ್‌ ಮಾಡುವುದು ಸಾಧ್ಯವೇ ಇಲ್ಲ ಎಂದು ಹೆಂಡತಿ ಹೇಳಿದಾಗ ಕೆರಳಿದ ಪಪ್ಪು ಜಗಳಕ್ಕೆ ನಿಂತಿದ್ದ. ಗಂಡ ಹೆಂಡತಿ ಜಗಳ ವಿಕೋಪಕ್ಕೆ ತಿರುಗುತ್ತಿರುವುದನ್ನು ನೋಡಿ ನೆರೆಮನೆಯ ಬಿಲ್ಲು ಬಿಡಿಸಲು ಬಂದ. ಆದರೆ ಆಗ ಪಪ್ಪುವಿನ ಸಿಟ್ಟು ಬಿಲ್ಲು ಮೇಲೆ ತಿರುಗೆ ಅವನನ್ನು ಹಿಗ್ಗಾಮುಗ್ಗಾ ಥಳಿಸಿದ. ಗಂಭೀರವಾಗಿ ಗಾಯಗೊಂಡಿದ್ದ ಬಿಲ್ಲು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ ಬಳಿಕ ಪಪ್ಪು ವಿರುದ್ಧ ಕೊಲೆ ಕೇಸ್‌ ದಾಖಲಾಗಿ ಕಂಬಿ ಎಣಿಸುತ್ತಿದ್ದಾನೆ.

error: Content is protected !!
Scroll to Top