Saturday, December 10, 2022
spot_img
Homeಸುದ್ದಿದೈವಾರಾಧನೆ ಹಿಂದೂ ಅಚರಣೆಯಲ್ಲ ಎಂದ ನಟ ಚೇತನ್‌ ಹೇಳಿಕೆಗೆ ಭಾರಿ ವಿರೋಧ

ದೈವಾರಾಧನೆ ಹಿಂದೂ ಅಚರಣೆಯಲ್ಲ ಎಂದ ನಟ ಚೇತನ್‌ ಹೇಳಿಕೆಗೆ ಭಾರಿ ವಿರೋಧ

ತುಳು ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಕತ್ತಲಸಾರ್ ಆಕ್ಷೇಪ

ಮಂಗಳೂರು : ದೈವದ ಆರಾಧನೆ ಹಿಂದೂ ಧರ್ಮದ ಆಚರಣೆಯಲ್ಲ ಎಂದಿರುವ ನಟ ಚೇತನ್‌ ಅನಂದ್‌ ಹೇಳಿಕೆಗೆ ಕರಾವಳಿಯಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಹಲವು ಹಿಂದು ಸಂಘಟನೆಗಳು ಈ ಹೇಳಿಕೆಯನ್ನು ವಿರೋಧಿಸಿ ದೂರು ದಾಖಲಿಸಿವೆ. ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೆ ಖಂಡಿಸಿ ಪುಂಖಾನುಪುಂಖವಾಗಿ ಪೋಸ್ಟ್‌ಗಳು ಹರಿದಾಡುತ್ತಿವೆ. ಕಾಂತಾರ ಸಿನೆಮಾದ ಬಗ್ಗೆ ಮಾತನಾಡುತ್ತ ನಟ ಚೇತನ್ , ಭೂತಕೋಲ ಹಿಂದೂ ಧರ್ಮಕ್ಕೆ ಸೇರಿದ್ದಲ್ಲ ಎಂಬುದಾಗಿ ಹೇಳಿದ್ದರು. ಇದೀಗ ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ದಯಾನಂದ ಕತ್ತಲಸಾರ್ ಅವರೂ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಟನ ಹೇಳಿಕೆಯನ್ನು ವಿರೋಧಿಸುತ್ತೇನೆ. ನಮಗೆ ಇಂಥವರ ಪ್ರಮಾಣಪತ್ರ ಬೇಕಾಗಿಲ್ಲ. ಬ್ರಾಹ್ಮಣರಿಂದ ಹಿಡಿದು ಕೊರಗರ ವರೆಗೆ 16 ವರ್ಗಗಳು ದೈವರಾಧನೆ ಮಾಡುತ್ತಿವೆ. ಅವರೆಲ್ಲರೂ ಹಿಂದೂಗಳೇ. ಅವರು ಹಿಂದೂಗಳಲ್ಲ ಎಂದು ಹೇಳುವುದು ಅಕ್ಷಮ್ಯ. ಸಂಧಿ ಪಾಡ್ಡನಗಳಲ್ಲಿಯೂ ಶಿವ, ಪಾರ್ವತಿ, ಸಿರಿ, ವಿಷ್ಣುವಿನ ಉಲ್ಲೇಖವಿದೆ. ನಾನು ಕಳೆದ 37 ವರ್ಷಗಳಿಂದ ಸಂಶೋಧನಾತ್ಮಕವಾಗಿ ಅಧ್ಯಯನಶೀಲನಾಗಿ ದೈವರಾಧನೆ ಮಾಡಿಕೊಂಡು ಬಂದಿದ್ದೇನೆ. ಬ್ರಾಹ್ಮಣರು, ಜೈನರು, ನಾಥ ಪಂಥದವರು ಕೂಡ ದೈವಾರಾಧನೆ ಮಾಡುತ್ತಾರೆ. ಬ್ರಾಹ್ಮಣರ ಮನೆಗಳಲ್ಲೂ ದೈವಗಳಿವೆ. ಕೆಲವು ದೈವಗಳ ಮೂಲವೇ ಬ್ರಾಹ್ಮಣರ ಮನೆ. ಇದಕ್ಕೆ ಸಂಬಂಧಿಸಿ ಸಾಕಷ್ಟು ದಾಖಲೆಗಳಿವೆ. ಹಿಂದೂ ಧರ್ಮ ಒಡೆಯುವ ಪ್ರಯತ್ನ ಒಳ್ಳೆಯದಲ್ಲ ಎಂದು ದಯಾನಂದ ಹೇಳಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!