ಕಾರ್ಕಳ : ಭಾರಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಾಂತಾರ ಚಿತ್ರವನ್ನು ಇದೀಗ ತಂಡೋಪ ತಂಡವಾಗಿ ವೀಕ್ಷಣೆ ಮಾಡುತ್ತಿರುವ ಟ್ರೆಂಡ್ ಒಂದು ಪ್ರಾರಂಭವಾಗಿದೆ. ಕಾರ್ಕಳ ಕಸ್ಬಾ ಕಾವೇರಡ್ಕ ಅಯೋಧ್ಯಾನಗರದ 90 ಮಂದಿ ಶ್ರೀ ಲಕ್ಷ್ಮೀ ಗೆಳೆಯರ ಬಳಗದ ನೇತೃತ್ವದಲ್ಲಿ ಕಾರ್ಕಳ ಮೂವಿ ಪ್ಲಾನೆಟ್ ಚಿತ್ರಮಂದಿರಲ್ಲಿ ಚಿತ್ರ ವೀಕ್ಷಿಸಿ ಸಂಭ್ರಮಿಸಿದ್ದಾರೆ. ಕಾಂತಾರ ಚಿತ್ರದ ಡೈಲಾಗ್‌ನೊಂದಿಗೆ ಕಾರ್ಕಳ ಕುಕ್ಕುಂದೂರು ಗ್ರಾಮದ ಪುಟಾಣಿಗಳು ಮಾಡಿದ ವಿಡಿಯೋವೊಂದು ಕಳೆದ ಎರಡು ದಿನಗಳಿಂದ ಭಾರಿ ವೈರಲ್ ಆಗಿದ್ದು, ಇದೀಗ ಕಾವೇರಡ್ಕದವರು ಒಟ್ಟಿಗೆ ಚಿತ್ರ ವೀಕ್ಷಣೆ ಮಾಡಿರುವುದು ಕೂಡ ದೊಡ್ಡ ಸುದ್ದಿಯಾಗಿದೆ.
ಕಾರ್ಕಳ ಊರೊಂದರ 90 ಮಂದಿ ಒಟ್ಟಿಗೆ ಕಾಂತಾರ ಚಿತ್ರ ವೀಕ್ಷಣೆ


































































