ಕಾರ್ಕಳ: ವಕೀಲರ ಸಂಘ ಮತ್ತು ಆಶಯ ಸೌಹರ್ದ ಸಹಕಾರ ಸಂಘದ ಸಹಭಾಗಿತ್ವದಲ್ಲಿ ಇ- ಸ್ಟ್ಯಾಪಿಂಗ್ ಸೇವೆಯ ಉದ್ಘಾಟನೆ ಮತ್ತು ಮುದ್ರಾಂಕ ಹಾಗೂ ನೋಂದಣಿ ಕಾನೂನಿನ ಬಗ್ಗೆ ಮಾಹಿತಿ ಕಾರ್ಯಕ್ರಮ ಅ.18ರಂದು ಕಾರ್ಕಳದ ಪುರಸಭಾ ಕಚೇರಿಯ ಮುಂಭಾಗದಲ್ಲಿರುವ ಆಶಯ ಸೌಹರ್ದ ಸಹಕಾರ ಸಂಘದಲ್ಲಿ ನಡೆಯಿತು.

ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಇ-ಸ್ಟ್ಯಾಪಿಂಗ್ ಸೇವೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ವಕೀಲರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಜಿ. ಮುರಲೀಧರ ಭಟ್ ಇ-ಸ್ಟ್ಯಾಪಿಂಗ್ ಸೇವೆ ಮತ್ತು ಮುದ್ರಾಂಕ ಹಾಗೂ ನೋಂದಣಿ ಕಾನೂನಿನ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಆಶಯ ಸೌಹರ್ದ ಸಹಕಾರ ಸಂಘದ ಅಧ್ಯಕ್ಷ ಎಮ್.ಕೆ. ಸುವೃತ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಕೀಲರ ಸಂಘದ ಕಾರ್ಯದರ್ಶಿ ಪದ್ಮರಾಜ್ ಜೈನ್, ಕಾರ್ಕಳ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಕೆ.ಪಿ. ಶ್ರೀಕಾಂತ್ ರಾವ್ ಮತ್ತು ಎಂ.ಕೆ. ವಿಜಯ್ ಕುಮಾರ್ ಮತ್ತಿತರು ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿ ಮಂಜುನಾಥ್ ಸ್ವಾಗತಿಸಿ, ನಿರಂಜನ್ ಜೈನ್ ಕಾರ್ಯಕ್ರಮ ನಿರೂಪಿಸಿ, ಪ್ರಕಾಶ್ ರಾವ್ ವಂದಿಸಿದರು.

































































