Thursday, December 1, 2022
spot_img
Homeಸುದ್ದಿಕಾರ್ಕಳ : ಕುಲಾಲ ಸುಧಾರಕ ಸಂಘದ 27ನೇ ವಾರ್ಷಿಕ ಮಹಾಸಭೆ

ಕಾರ್ಕಳ : ಕುಲಾಲ ಸುಧಾರಕ ಸಂಘದ 27ನೇ ವಾರ್ಷಿಕ ಮಹಾಸಭೆ

ಕಾರ್ಕಳ: ಸಮಾಜದ ಜನತೆಗೆ ಸಹಕಾರ ನೀಡುವುದು ಜನಪ್ರತಿನಿಧಿಯ ಜವಾಬ್ದಾರಿ. ಅಣ್ಣಯ್ಯ ಕುಲಾಲ್ ಉಳ್ತೂರು ಅವರಿಗೆ ದೊರೆತ ಪ್ರಶಸ್ತಿ ಕುಲಾಲ ಸಮಾಜಕ್ಕೆ ದೊರೆತ ಗೌರವ. ಬೆವರಿಳಿಸಿ ದುಡಿಯುವ ವರ್ಗ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬರಬೇಕು ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.

ಅವರು ಭಾನುವಾರ ಜೋಡುರಸ್ತೆಯ ಕುಲಾಲ ಸಭಾಭವನದಲ್ಲಿ ನಡೆದ ಕುಲಾಲ ಸುಧಾರಕ ಸಂಘದ 27ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

ಸನ್ಮಾನ
ಡಿ. ದೇವರಾಜ ಅರಸು ರಾಜ್ಯ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ರಾಜ್ಯ ಕಾರ್ಯಾಧ್ಯಕ್ಷ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು, ಯುವ ವಿಜ್ಞಾನಿ ಪ್ರಶಸ್ತಿ ವಿಜೇತ ಡಾ. ಪ್ರಜ್ವಲ್ ಕುಲಾಲ್, ದೈಹಿಕ ಶಿಕ್ಷಣ ನಿರ್ದೇಶಕ ಡಾ. ನಿತಿನ್, ಉಡುಪಿ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತ ಪ್ರಶಾಂತ್ ಎನ್. ಎಸ್., ಪ್ರಗತಿಪರ ಕೃಷಿಕ ಬೋಳದ ಮಹಾಬಲ ಕೆ. ಮೂಲ್ಯ, ಎಸ್ಎಸ್ಎಲ್‌ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ (99.84%) ನೇಹಾ ಸಾಣೂರು, ತೃತೀಯ ಸ್ಥಾನ ಪಡೆದ (99.68%) ಶ್ರಾವ್ಯ ಕರ್ಮರನ್ ಮತ್ತು ಆರನೇ ಸ್ಥಾನ ಪಡೆದ (99.20%) ಅವ್ಯಕ್ತ ಎಸ್., ಅವರನ್ನು ಸನ್ಮಾನಿಸಲಾಯಿತು.

ಇತ್ತೀಚೆಗೆ ನಿಧನರಾದ ಸಂಘದ ಮಾಜಿ ಅಧ್ಯಕ್ಷ ಲಿಂಗಪ್ಪ ಕೈರುಂಜ ಮತ್ತು ಸದಸ್ಯ ಕೆರ್ವಾಶೆಯ ರಾಜು ಮೂಲ್ಯ ಅವರಿಗಾಗಿ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಭೋಜ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ದಕ್ಷಿಣ ಕನ್ನಡ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ ವರ್ಮನ್, ಡಾ. ರಶ್ಮೀ ಟಿ. ಮೂಲ್ಯ, ಜೋಡುರಸ್ತೆ ಕುಂಭಶ್ರೀ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಮೂಲ್ಯ, ಹೊಸ್ಮಾರು, ಕುಲಾಲ ಸಮಾಜ ಕಲ್ಯಾಣ ಸಂಘದ ಅಧ್ಯಕ್ಷ ಪ್ರಮೋದ್ ಕುಲಾಲ್, ಪೆರ್ಡೂರು ಗುಡಿ ಕೈಗಾರಿಕಾ ಸಹಕಾರ ಸಂಘದ ಉಪಾಧ್ಯಕ್ಷ ಶಂಕರ್ ಕುಲಾಲ್, ಸಂಘದ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಎಚ್. ಮತ್ತಿತರು ಉಪಸ್ಥಿತರಿದ್ದರು. ಯುವ ವೇದಿಕೆ ಜಿಲ್ಲಾಧ್ಯಕ್ಷ ದಿವಾಕರ ಎಂ. ಬಂಗೇರ ಸ್ವಾಗತಿಸಿದರು. ಕುಮಾರಿ ಸನ್ನಿಧಿ ಪ್ರಾರ್ಥಿಸಿ, ಸಂಘದ ಸದಸ್ಯೆ ಸಂಗೀತ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಸುರೇಂದ್ರ ವಂದಿಸಿದರು.

ಸನ್ಮಾನ

LEAVE A REPLY

Please enter your comment!
Please enter your name here

Most Popular

error: Content is protected !!