ಮತ್ತೆ ಬರಬೇಡ ಈ ಭೂಮಿಗೆ…

ಮತ್ತೆ ಬರಬೇಡ
ಮತ್ತೆ ಬರಬೇಡ
ಈ ಭೂಮಿಯ ಮೇಲೆ
ನೀನೊಂದು ಹೆಣ್ಣಾಗಿ
ಜಗಕೆ ಬೆಳಕ ತೋರುವ ಕಣ್ಣಾಗಿ

ಸುಡುವರಮ್ಮ ನಿನ್ನ
ದೇಹವನು ಇಂಚು ಇಂಚು
ರೂಪಿತಗೊಂಡೆ ಬಂದಿಹುದು
ನಿನಗರಿವಾಗದೆ ಹೋಯಿತು
ಪಾಪಿಗಳ ಸಂಚು

ಏಕೆ ಬಗೆಯ ನೋವು ನೀಡಿದಿರಿ
ಕೇಳಬಹುದು ನಿನ್ನ ಆತ್ಮ
ಕರುಣೆಯೇ ಇರದೆ ನಿನ್ನ
ಕನಸುಗಳ ಕೊಚ್ಚಿಹ ಅವರಗಳ
ಹೃದಯದಿ ತುಂಬಿಹನು ದುರಾತ್ಮ

ಉರಿದವು ಮೋಂಬತ್ತಿಗಳು
ನಿನಗೆ ವಿದಾಯ ಹೇಳಲು
ಇನ್ನೆಷ್ಟು ಜೀವಗಳು ಕರಟಬೇಕೋ
ಆ ಉರಿವ ಬತ್ತಿ ಆರಲು…

ಬರಬೇಡಮ್ಮ…
ಬರಬೇಡಮ್ಮ….
ಹೆಣ್ಣಾಗಿ ಈ ಭೂಮಿಯ ಮೇಲೆ.

ವಿಕ್ರಮ್ ಕಾರ್ಕಳ









































































































error: Content is protected !!
Scroll to Top